IMG_20261024_001212.png
Spread the love

ಕುಂದಾಪುರ: ದಿನಾಂಕ:24-10-2026(ಹಾಯ್ ಉಡುಪಿ ನ್ಯೂಸ್) ಕುಂದಾಪುರ ನಿವಾಸಿ ವ್ಯಕ್ತಿ ಯೋರ್ವರಿಗೆ ಕ್ರೆಡಿಟ್ ಕಾರ್ಡ್ ನೀಡುವುದಾಗಿ ನಂಬಿಸಿ ಯಾರೋ ಸೈಬರ್ ವಂಚಕರು 2.25 ಲಕ್ಷ ರೂಪಾಯಿ ವಂಚನೆ ನಡೆಸಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಶೇಖರ (68) ಎಂಬವರು ದಿನಾಂಕ 21/10/2026 ರಂದು ಮನೆಯಲ್ಲಿರುವಾಗ ಮಧ್ಯಾಹ್ನ 12:00 ಗಂಟೆಗೆ ಮೊಬೈಲ್ ಗೆ ಓರ್ವ ಅಪರಿಚಿತ ಗಂಡಸು ಹಿಂದಿ ಬಾಷೆಯಲ್ಲಿ ಶೇಖರರವರ ಬಳಿ ನೀವು ಸೀನಿಯರ್ ಸಿಟಿಜನ್ ಆಗಿರುವುದರಿಂದ ನಿಮಗೆ ಪಂಜಾಬ್ ನ್ಯಾಶನಲ್ ಬ್ಯಾಂಕ್ ನಿಂದ ಕ್ರೆಡಿಟ್ ಕಾರ್ಡ್ ನ್ನು ನೀಡುತ್ತಿದ್ದೇವೆ ಅಂತ ಹೇಳಿ ಶೇಖರರವರ ಕ್ರೆಡಿಟ್ ಕಾರ್ಡ್ ಬಗ್ಗೆ ಮಾಹಿತಿ ಪಡೆದು PNB CREDIT CARD.apk ಪೈಲ್ ಅನ್ನು ಕಳುಹಿಸಿ ಬ್ಯಾಂಕ್ ಆಫ್ ಬರೋಡಕ್ಕೆ ಸಂಬಂದಿಸಿದಂತೆ ವಿವರವನ್ನು ಕೇಳಿರುತ್ತಾನೆ.

ಬಳಿಕ ಸಂಜೆ 4:00 ಗಂಟೆಯ ಸಮಯಕ್ಕೆ ಶೇಖರರವರು ಮೊಬೈಲ್ ಇನ್ಬಾಕ್ಸ್ ಚೆಕ್ ಮಾಡಿದಾಗ ಅದರಲ್ಲಿ OTP ಶೇರ್ ಆಗಿ ಶೇಖರರವರ ಬ್ಯಾಂಕ್ ಆಪ್ ಬರೋಡಾ ಕ್ರೇಡಿಟ್ ಕಾರ್ಡ್ ನಿಂದ 1,30,490/- ರೂಪಾಯಿ, 22,167/- ರೂಪಾಯಿ , 10,000/- ರೂಪಾಯಿ , ಮತ್ತು RBL (Rathnakara Bank Limited) ಬ್ಯಾಂಕ್ ಕ್ರೇಡಿಟ್ ಕಾರ್ಡ್ ನಿಂದ 3,468.34 /-, ರೂಪಾಯಿ, 20,000/- ರೂಪಾಯಿ , 37,999/- ರೂಪಾಯಿ ಒಟ್ಟು 2,24,124,34/- ರೂಪಾಯಿ ಹಣವನ್ನು ಯಾರೋ ಸೈಬರ್ ಅಪರಾಧಿಗಳು ವರ್ಗಾಯಿಸಿಕೊಂಡಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 90/2026 ಕಲಂ: 66 (C),66 (D ) IT ACT ರಂತೆ ಪ್ರಕರಣ ದಾಖಲಾಗಿದೆ.

error: No Copying!