Spread the love

ಉಡುಪಿ : ಜೂನ್ ೧೪(ಹಾಯ್ ಉಡುಪಿ ನ್ಯೂಸ್) ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿದ ವ್ಯಕ್ತಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.

ಹಿರಿಯಡ್ಕ  ಅಂಚೆ,  ಬೊಮ್ಮರಬೆಟ್ಟು  ಗ್ರಾಮದ, ಕೋಟ್ನ ಕೊಟ್ಟೆ,ರಾಜಾಜಿ ರಸ್ತೆ ನಿವಾಸಿ ಬಿ.ಪ್ರಕಾಶ್ ಪೈ (67  ವರ್ಷ)ರವರು ಹಿರಿಯಡ್ಕದ  ಕೋಟ್ನಕಟ್ಟೆಯ ‘ನಿಸರ್ಗ ಹೌಸ್‌’ನಲ್ಲಿ ವಾಸವಿದ್ದವರು, ದಿನಾಂಕ: 13/06/2022 ರಂದು  ಬೆಳಿಗ್ಗೆ  11:30  ಗಂಟೆಯ  ಸುಮಾರಿಗೆ  ಉಡುಪಿಯ  ಸರ್ವೀಸ್‌ ಬಸ್‌ನಿಲ್ದಾಣದ  ಬಳಿಯಿರುವ  ಡಾ. ಆರ್‌ಎನ್‌ ಭಟ್‌ರವರ  ಕ್ಲಿನಿಕ್‌ಗೆ ಚಿಕಿತ್ಸೆಯ  ಬಗ್ಗೆ  ಬಂದವರು  ಇದುವರೆಗೂ   ವಾಪಾಸು  ಮನೆಗೆ  ಬಾರದೇ, ಮೊಬೈಲ್‌ ಸಂಪರ್ಕಕ್ಕೂ ಸಿಗದೇ ಕಾಣೆಯಾಗಿರುತ್ತಾರೆಎಂದು ಅವರು ಪುತ್ರ ಬಿ.ಪ್ರದೀಪ್ ಪೈ ದೂರು ದಾಖಲಿಸಿದ್ದು ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಗಂಡಸು ಕಾಣೆಯಂತೆ ಪ್ರಕರಣ ದಾಖಲಿಸಲಾಗಿದೆ.  

error: No Copying!