IMG_20261018_174747.png
Spread the love

ಬ್ರಹ್ಮಾವರ: ದಿನಾಂಕ:18-10-2026 (ಹಾಯ್ ಉಡುಪಿ ನ್ಯೂಸ್) ಆಸ್ತಿಯೊಂದರ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋ ಆಪರೇಟಿವ್ ಸೊಸೈಟಿ ಒಂದರಿಂದ ಸಾಲ ಪಡೆದು ವಂಚನೆ ನಡೆಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಉಡುಪಿಯ SGR Credit Co-operative Society Ltd, ಇವರು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಂತೆ ಆರೋಪಿತರಾದ  ಶ್ರೀ ಯು. ಅಭಿಷೇಕ್ ಮತ್ತು ಶ್ರೀಮತಿ ರಮಾ ಜೆ. ರಾವ್ ಅವರು ಆಸ್ತಿಗೆ ಸಂಬಂಧಿಸಿದ ಕ್ರಯಸಾಧನ ಹಾಗೂ ಅಡಮಾನ ದಾಖಲೆಗಳನ್ನು ಸಲ್ಲಿಸಿ ರೂ.1,60,00,000/- ಸಾಲಕ್ಕೆ ಅರ್ಜಿ ಸಲ್ಲಿಸಿದ್ದು, ಈ ಸಾಲದ ವ್ಯವಹಾರಕ್ಕೆ ಸಂಬಂಧಿಸಿದಂತೆ ದಿನಾಂಕ 17-09-2026 ರಂದು ಕ್ರಯಸಾಧನ ಹಾಗೂ ಅಡಮಾನಕ್ಕೆ ಸಂಬಂಧಿಸಿದ ದಾಖಲೆಗಳು ಬ್ರಹ್ಮಾವರ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿಯಾಗಿರುತ್ತವೆ.

ಈ ದಾಖಲೆಗಳನ್ನು ಮೂಲ ದಾಖಲೆಗಳೆಂದು ನಂಬಿ ಸೊಸೈಟಿಯು ಒಟ್ಟು ರೂ.1,00,00,500/- ಮೊತ್ತವನ್ನು ಆರೋಪಿತರಿಗೆ ಬಿಡುಗಡೆ ಮಾಡಿರುತ್ತದೆ. ನಂತರ, ಈ ಆಸ್ತಿಗೆ ಸಂಬಂಧಿಸಿದ ಶ್ರೀ ಮೊಹಮ್ಮದ್ ಶಾಕೀರ್ ಅವರು ದಾಖಲೆಗಳ ಸತ್ಯಾಸತ್ಯತೆ ಹಾಗೂ ತಮ್ಮ ಸಹಿ ಮತ್ತು ಇತರೆ ದಾಖಲೆಗಳ ದುರುಪಯೋಗದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುತ್ತಾರೆ.

ಈ ಮೂಲಕ ನಕಲಿ ದಾಖಲೆಗಳ ಸೃಷ್ಟಿ, ವಂಚನೆ ಹಾಗೂ ಅವುಗಳನ್ನು ಅಸಲಿ ದಾಖಲೆಗಳೆಂದು ಬಳಸಿರುವ ಬಗ್ಗೆ ಸತ್ಯಾ ಸತ್ಯತೆಯ ತನಿಖೆ ನಡೆಸುವ ಉದ್ಧೇಶದಿಂದ ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಉಡುಪಿಯ SGR Credit Co-operative Society Ltd ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ: 196/2026 ಕಲಂ: 316(2), 318(4), 336(3), 338, 340(2) RW 3(5) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!