IMG_20261017_191901.png
Spread the love

ಉಡುಪಿ: ದಿನಾಂಕ: 17-10-2026 (ಹಾಯ್ ಉಡುಪಿ ನ್ಯೂಸ್) ಮಂಗಳೂರು ನಿವಾಸಿ ಶ್ರೀಮತಿ ಮೇಘನಾ ಎಂಬವರಿಗೆ ಗಂಡ ಹಾಗೂ ಗಂಡನ ಮನೆಯವರು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ ಎಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮಂಗಳೂರು,ಡೊಂಗರಕೇರಿ ನಿವಾಸಿ ಶ್ರೀಮತಿ ಮೇಘನಾ (37) ಎಂಬವರಿಗೆ ದಿನಾಂಕ: 25-04-2022 ರಂದು ಮಲ್ಪೆ ಯ ಪ್ರಣಾಮ್ ಎಂಬವರೊಂದಿಗೆ ಮಂಗಳೂರಿನ ಸಾಯಿ ಪ್ಯಾಲೇಸ್ ನಲ್ಲಿ ನಿಶ್ಚಿತಾರ್ಥ ಆಗಿದ್ದು   ದಿನಾಂಕ: 05-09-2022 ರಂದು ಮೇಘನಾ ರವರ ಹಾಗೂ ಪ್ರಣಾಮ್ ರವರ ಮದುವೆಯು ಕುದ್ರೋಳಿ ಗೋಕರ್ಣನಾಥೇಶ್ವರ  ಸಭಾಭವನದಲ್ಲಿ ನಡೆದಿರುತ್ತದೆ.

ದಿನಾಂಕ: 07-09-2022 ರಂದು ಮದುವೆಯ ಆರತಕ್ಷತೆಯು ಟಿ.ಎಂ.ಎ.ಪೈ. ಹಾಲ್ ನಲ್ಲಿ ನಡೆದಿದ್ದು ಮದುವೆಯ ಎಲ್ಲಾ ಖರ್ಚು ವೆಚ್ಚಗಳು ಸುಮಾರು 13 ಲಕ್ಷ ರೂಪಾಯಿಗಳನ್ನು ಮೇಘನಾ ರವರ ತಾಯಿಯವರೇ ಭರಿಸಿರುವುದಲ್ಲದೆ. ಮೇಘನಾ ರವರ ಗಂಡ ಪ್ರಣಾಮ್ ರವರಿಗೆ ಮೇಘನಾರವರ ತವರು ಮನೆಯವರು ವಜ್ರದ ಉಂಗುರ, ಚಿನ್ನದ ಸರ, ಹಾಗೂ ಬಂಗಾರದ ಬ್ರಾಸ್ ಲೈಟನ್ನು ಉಡುಗೊರೆಯಾಗಿ ನೀಡಿರುತ್ತಾರೆ.

ಮದುವೆಯ ನಂತರ ಮೇಘನಾ ರವರು ಗಂಡನ ಮನೆಯಾದ ಮಲ್ಪೆಯಲ್ಲಿ  ವಾಸವಾಗಿಕೊಂಡಿದ್ದಾಗ ಆಕೆಯ ಗಂಡನಾದ ಪ್ರಣಾಮ್ ಎಂಬಾತನು ವಿನಾಕಾರಣ ಗಲಾಟೆ ಮಾಡಿ ಅವಾಚ್ಯವಾಗಿ ಬೈದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದುದಲ್ಲದೆ ಮೇಘನಾ ರ ಗಂಡನ ತಂದೆ ನಾರಾಯಣ ಶೆಟ್ಟಿ, ಅತ್ತೆ ಶಶಿಕಲಾ ರವರು ಕುಮ್ಮಕ್ಕು ನೀಡುತ್ತಿದ್ದುದಾಗಿಯೂ  ಹಾಗೂ ಮೇಘನಾ ರವರು ಆಕೆಯ ಗಂಡನ ಜೊತೆ ವಿದೇಶದಲ್ಲಿದ್ದಾಗ ಅಲ್ಲಿಯೂ ಕೂಡಾ ಮೇಘನಾ ರವರ ಗಂಡ ಮೇಘನಾರಿಗೆ ಕೈಯಿಂದ ಹೊಡೆದು ಬೈದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುತ್ತಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಮೇಘನಾ ಅವರು ದೂರಿ ಕೊಂಡಿದ್ದಾರೆ.

ಈ ಬಗ್ಗೆ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ: 66/2026 ಕಲಂ:  498(ಎ), 323, 504 ಜೊತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಾಗಿದೆ.

error: No Copying!