images.jpeg
Spread the love

ಬೆಂಗಳೂರು: ದಿನಾಂಕ:14-10-2026(ಹಾಯ್ ಉಡುಪಿ ನ್ಯೂಸ್) ಮಾದಕವಸ್ತುಗಳ ವಿರುದ್ಧದ ಸರ್ಕಾರದ ಸಮರ ಮುಂದುವರೆದಿದೆ ಎಂದು ಗ್ರಹ ಸಚಿವ ಶ್ರೀ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಹಲವು ಬಗೆಯ ಮಾದಕವಸ್ತುಗಳು ಇತರ ದೇಶಗಳಿಂದ, ಇತರ ರಾಜ್ಯಗಳಿಂದ ಕರ್ನಾಟಕದೊಳಗೆ ಸಾಗಿಸುವ ಕಳ್ಳಸಾಗಣೆಯ ಜಾಲಗಳನ್ನು ಗುರುತಿಸಿ, ಅಂತಹ ಜಾಲಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಗೃಹ ಇಲಾಖೆ ಕಾರ್ಯಾಚರಣೆಗಳನ್ನು ಕೈಗೊಂಡಿದೆ.

ಮಾದಕ ವಸ್ತು ಕಳ್ಳಸಾಗಣೆಯ ವಿರುದ್ಧದ ಕಾರ್ಯಾಚರಣೆಯಲ್ಲಿ, ಒಡಿಶಾದಿಂದ ಬೆಂಗಳೂರು ಮೂಲಕ ಕೇರಳಕ್ಕೆ ಸಾಗಿಸುತ್ತಿದ್ದ ₹1.78 ಕೋಟಿ ಮೌಲ್ಯದ 317 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡು, ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ, ಒಂದು ಇನ್ನೋವಾ ಕಾರನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದರು.

ಕಳ್ಳಸಾಗಣೆ ಜಾಲದಲ್ಲಿ ಭಾಗಿಯಾದ ಇತರ ವ್ಯಕ್ತಿಗಳ ಪತ್ತೆಗೂ ಕಾರ್ಯಾಚರಣೆ ಮುಂದುವರೆದಿದ್ದು, ಮಾದಕವಸ್ತುಗಳ ಪಿಡುಗನ್ನು ಬೇರು ಮಟ್ಟದಿಂದ ನಿರ್ಮೂಲನೆಗೊಳಿಸುವ ಪ್ರಾಮಾಣಿಕ ಪ್ರಯತ್ನದಲ್ಲಿ ಸರ್ವರ ಸಹಕಾರ ಅತ್ಯಗತ್ಯ ಎಂದು ಗ್ರಹ ಸಚಿವರು ಹೇಳಿದರು.

error: No Copying!