ಕಾಪು: ದಿನಾಂಕ:09-10-2026 (ಹಾಯ್ ಉಡುಪಿ ನ್ಯೂಸ್) ಇನ್ನಂಜೆ ಗ್ರಾಮದ ಹೊಳೆ ಬದಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜುಗಾರಿ ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಕಾಪು ಪೊಲೀಸ್ ಠಾಣೆಯ ಪಿಎಸ್ಐ ಶುಭಕರ ಅವರು ಬಂಧಿಸಿದ್ದಾರೆ.
ಕಾಪು ಪೊಲೀಸ್ ಠಾಣೆಯ ಪಿ.ಎಸ್.ಐ ಶುಭಕರರವರು ದಿನಾಂಕ:04.10.2026 ರಂದು ಠಾಣೆಯಲ್ಲಿರುವ ಸಮಯ ಮಾಹಿತಿದಾರರೋರ್ವರು ಕರೆ ಮಾಡಿ ಕಾಪು ತಾಲೂಕು, ಇನ್ನಂಜೆ ಗ್ರಾಮದ, ಮಡಂಬು ಪಾಪನಾಶಿನಿ ಹೊಳೆ ಬದಿ ಹಾಡಿ ಪ್ರದೇಶದಲ್ಲಿ ಸಾರ್ವಜನಿಕ ಸ್ಥಳದಲ್ಲಿಲ ಕೆಲವು ಜನರು ಸೇರಿಕೊಂಡು ಅಕ್ರಮವಾಗಿ ಅಂದರ್-ಬಾಹರ್ ಎಂಬ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದಾರೆ ಎಂಬುದಾಗಿ ಮಾಹಿತಿ ನೀಡಿದ್ದಾರೆ .
ಕೂಡಲೇ ಪಿಎಸ್ಐ ಯವರು ಸಿಬ್ಬಂದಿಗಳನ್ನು ಜೊತೆಯಲ್ಲಿ ಕರೆದುಕೊಂಡು ಮಾಹಿತಿ ಬಂದ ಸ್ಥಳವಾದ ಕಾಪು ತಾಲೂಕು, ಇನ್ನಂಜೆ ಗ್ರಾಮದ, ಮಡಂಬು ಪಾಪನಾಶಿನಿ ಹೊಳೆ ಬದಿ ತಲುಪಿದಾಗ ಅಲ್ಲಿ ಹೊಳೆ ಬದಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಸೇರಿಕೊಂಡಿದ್ದು, ಅದರಲ್ಲಿ ಓರ್ವ ವ್ಯಕ್ತಿ ಸುತ್ತಲೂ ಕುಳಿತುಕೊಂಡಿದ್ದ ಜನಗಳ ಎದುರಿನಲ್ಲಿ ಇಸ್ಪೀಟ್ ಎಲೆಗಳನ್ನು ಹಾಕುತ್ತಿದ್ದು, ಜನಗಳು ಹಣವನ್ನು ಪಣವಾಗಿ ಕಟ್ಟುತ್ತಿದ್ದರು.
ಒಳಗಡೆ ಸೇರಿದ್ದ ಜನರು ಅಕ್ರಮವಾಗಿ ಅಂದರ್–ಬಾಹರ್ ಎಂಬ ಇಸ್ಪೀಟ್ ಆಟ ಆಡುತ್ತಿದ್ದಲ್ಲಿಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದಾಗ ಪೊಲೀಸರನ್ನು ನೋಡಿ ಅಲ್ಲಿದ್ದ ಜನರು ಓಡಲು ಪ್ರಾರಂಬಿಸಿದ್ದು, ಪೊಲೀಸರು ಅವರನ್ನು ಬೆನ್ನೆಟ್ಟಿದ್ದು, ಓಡಿ ಹೋದವರ ಪೈಕಿ 4 ಜನರನ್ನು ಹಿಡಿದಿರುತ್ತಾರೆ. ಅವರುಗಳ ಹೆಸರು, ವಿಳಾಸ ವಿಚಾರಿಸಿದಾಗ 1) ಪರಶುರಾಮ ಎಣ್ಣಿ 2) ಶರಣಪ್ಪ ತಳವಾರ 3) ಮಂಜುನಾಥ ಉಳ್ಳಾಗಡ್ಡಿ 4) ಶರಣಪ್ಪ ಮುಶಿಗೇರಿ ಎಂಬುದಾಗಿ ತಿಳಿಸಿರುತ್ತಾರೆ.
ಬಂಧಿತ ವ್ಯಕ್ತಿಗಳಲ್ಲಿ ಸ್ಥಳದಿಂದ ಓಡಿ ಹೋದವರ ಬಗ್ಗೆ ವಿಚಾರಿಸಿದಾಗ ಅವರ ಹೆಸರು, ವಿಳಾಸ ಗೊತ್ತಿಲ್ಲವೆಂದು ತಿಳಿಸಿರುತ್ತಾರೆ. ಸ್ಥಳದಲ್ಲಿ ಇಸ್ಪೀಟ್ ಜುಗಾರಿ ಆಟ ಆಡಲು ಬಳಸಿದ ಸ್ವತ್ತುಗಳನ್ನು ಪರಿಶೀಲಿಸಲಾಗಿ 1) ವಿವಿಧ ಬಣ್ಣಗಳ ಇಸ್ಪೀಟ್ ಎಲೆಗಳು – 52, 2) 1,360/- ರೂ ನಗದು ಹಣ, 3) ಪ್ಲಾಸ್ಟಿಕ್ ತರ್ಪಾಲ್ -1 ಇದ್ದು, ಈ ಸ್ವತ್ತುಗಳನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿ ಕೊಂಡಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ:128/2026 ಕಲಂ: 87 KP ACT ರಂತೆ ಪ್ರಕರಣ ದಾಖಲಾಗಿದೆ.
