IMG_20261003_203514.png
Spread the love

ಕಾಪು: ದಿನಾಂಕ: 03-10-2026 ಹಾಯ್ ಉಡುಪಿ ನ್ಯೂಸ್) ಮಲ್ಲಾರ್ ಗ್ರಾಮದ ನಿವಾಸಿ ಯೋರ್ವರಿಗೆ ಅವರ ತಮ್ಮನ ಸ್ನೇಹಿತ ನೋರ್ವ ಕಾರಿನಲ್ಲಿ ಕರೆದೊಯ್ದು ಗಂಭೀರ ಹಲ್ಲೆ ನಡೆಸಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕಾಪು,ಮಲ್ಲಾರು ಗ್ರಾಮದ ನಿವಾಸಿ ಕೆ.ಎಸ್‌ ಮೊಹಮ್ಮದ್‌ ಹಮ್ರಾಝ್ (29)ಎಂಬವರ ತಮ್ಮ ನಿಹಾಲ್‌ ಅಹ್ಮದ್‌ ಲ್ಯಾಂಡ್‌ ಲಿಂಕ್ಸ್‌ ಕೆಲಸ ಮಾಡಿಕೊಂಡಿರುತ್ತಾರೆ. ನಿಹಾಲ್‌ ಅಹ್ಮದ್‌ ರವರಿಗೆ ಮಜೂರು ಗ್ರಾಮದ ನಿವಾಸಿಯಾದ ಇಲ್ಯಾಸ್‌ ಹಸನಬ್ಬ ಸ್ನೇಹಿತನಾಗಿದ್ದು, ಅವನು ದಿನಾಂಕ 01/10/2026 ರಂದು ಮಧ್ಯಾಹ್ನ 2 ಗಂಟೆಯ ಸುಮಾರಿಗೆ KA-20-7533 ನೊಂದಣಿಯ ಸ್ವಿಫ್ಟ್‌ ಕಾರಿನಲ್ಲಿ ಕೆ.ಎಸ್ ಮೊಹಮ್ಮದ್ ರ ಮನೆಗೆ ಬಂದು ಅವರಲ್ಲಿ ಮಾತನಾಡಲು ಇದೆ ಕಾರಿನಲ್ಲಿ ಕುಳಿತುಕೊ ಎಂಬುದಾಗಿ ತಿಳಿಸಿದಂತೆ ಕೆ.ಎಸ್ ಮೊಹಮ್ಮದ್ ರು ಕಾರಿನಲ್ಲಿ ಕುಳಿತುಕೊಳ್ಳುವಾಗಲೇ ಅವರ ಮುಖಕ್ಕೆ ಒಂದು ಹೊಡೆದಿರುತ್ತಾನೆ.

ಆ ಬಳಿಕ ಕೆ.ಎಸ್ ಮೊಹಮ್ಮದ್ ರನ್ನು ಕಾರಿನಲ್ಲಿ ಕರೆದುಕೊಂಡು ಮಣಿಪಾಲದ Extreme fitness Gym ಗೆ ಹೋಗಿ ಅಲ್ಲಿ ಮೇಲೆ ಒಂದು ರೂಮಿನಲ್ಲಿ ಮುಚ್ಚಿ ಹಾಕಿರುತ್ತಾನೆ. ಮತ್ತೆ ಆ ರೂಮಿಗೆ ಬಂದು ಹೊಡೆಯುತ್ತಾ ಇರುತ್ತಿದ್ದನು. ರಾತ್ರಿ 10:20 ಕ್ಕೆ Gym ನಿಂದ ಕೆಳಗೆ ಕರೆದುಕೊಂಡು ಬಂದು ಕೆ.ಎಸ್ ಮೊಹಮ್ಮದ್ ರ ಎದೆ, ಕಿವಿ ಗೆ  ಕಾಲಿನಲ್ಲಿ ಹೊಡೆದಿರುತ್ತಾನೆ. ಆ ಬಳಿಕ ಕೆ ಎಸ್ ಮೊಹಮ್ಮದ್ ರು ತನ್ನ ತಾಯಿಗೆ ಕರೆ ಮಾಡಿ ಕಾಪು ಪೊಲೀಸ್‌ ಠಾಣೆಗೆ ಹೋಗುವಂತೆ ತಿಳಿಸಿ, ಕೆ.ಎಸ್ ಮೊಹಮ್ಮದ್ ರು ಅಲ್ಲಿಂದ ಉಡುಪಿಯ ಅಜ್ಜರಕಾಡು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಕೆ ಎಸ್ ಮೊಹಮ್ಮದ್ ರು ನೀಡಿದ ದೂರಿನಂತೆ ಕಾಪು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 125/2026 ಕಲಂ: 127(2), 115(2) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!