ಕಾರ್ಕಳ: ದಿನಾಂಕ:03-10-2026(ಹಾಯ್ ಉಡುಪಿ ನ್ಯೂಸ್) ಕಸಬಾ ಗ್ರಾಮದ ಬಸ್ಸು ನಿಲ್ದಾಣದ ಬಳಿಯ ಸ್ವಾಗತ್ ಬಾರ್ ಎಂಡ್ ರೆಸ್ಟೋರೆಂಟ್ ನಲ್ಲಿ ಗಾಂಧಿ ಜಯಂತಿಯ ದಿನದಂದು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಸಮಯ ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶಿವಕುಮಾರ್ ಎಸ್ ಆರ್ ಅವರು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶಿವಕುಮಾರ್ ಎಸ್ ಆರ್ ಅವರಿಗೆ ದಿನಾಂಕ 02/10/2026 ರಂದು ಗಾಂಧಿ ಜಯಂತಿಯ ದಿನವಾಗಿ ಮದ್ಯ ಮಾರಾಟ ಮಾಡಲು ನಿಷೇದವಿದ್ದರೂ ಕೂಡ ,ಕಾರ್ಕಳ ತಾಲೂಕಿನ ಕಸಬ ಗ್ರಾಮದ ಕಾರ್ಕಳ ಬಸ್ಸು ನಿಲ್ದಾಣ ಬಳಿ ಇರುವ ಸ್ವಾಗತ್ ಬಾರ್ & ರೆಸ್ಟೋರೆಂಟ್ ಲಾಡ್ಜಿಂಗ್‌ನ ಪ್ಯಾಸೇಜ್‌ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಸಾರ್ವಜನಿಕರಿಂದ ಬಂದ ಮಾಹಿತಿ ಮೇರೆಗೆ ಕೂಡಲೇ ಮಾಹಿತಿ ಬಂದ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.
ದಾಳಿ ಮಾಡಿದಾಗ, 1ನೇ ಆರೋಪಿ 1. ಜಗದೀಶ್ ಗಿರಾಕಿಗಳಿಗೆ ಅಕ್ರಮವಾಗಿ, ಮದ್ಯ ಮಾರಾಟ ಮಾಡಲು ವಶದಲ್ಲಿರಿಸಿಕೊಂಡಿದ್ದ ಐದು ಬಾಕ್ಸ್‌ನಲ್ಲಿದ್ದ ಪ್ರೆಸ್ಟಿಜ್ ವಿಸ್ಕಿಯ 90 ಎಂ ಎಲ್ ನ 75 ಸ್ಯಾಚೆಟ್, Jhons original deluxe whisky ಯ ಮದ್ಯ ತುಂಬಿದ 90 ಎಂ ಎಲ್ ನ 48 ಸ್ಯಾಚೆಟ್, Mysore Lancer whisky ಯ ಮದ್ಯ ತುಂಬಿದ 90 ಎಂ ಎಲ್ ನ 40 ಸ್ಯಾಚೆಟ್, Haywards Cheers Whisky ಮದ್ಯ ತುಂಬಿದ 90 ಎಂ ಎಲ್‌ನ 59 ಸ್ಯಾಚೆಟ್ ಹಾಗೂ Original choice deluxe Whisky ಯ ಮದ್ಯ ತುಂಬಿದ 180 ಎಂ ಎಲ್ ನ 27 ಸ್ಯಾಚೆಟ್ ಒಟ್ಟು ಅಂದಾಜು ಮೌಲ್ಯ 15,015/- ಮೊತ್ತದ ಮದ್ಯವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
2ನೇ ಆರೋಪಿ ರಾಜೇಶ್ ಶೆಟ್ಟಿ ಇವರು ಲೀಸ್‌ದಾರನಾದ 3. ಜಯಪ್ರಕಾಶ್ ಮತ್ತು ಕಟ್ಟಡದ ಲೈಸೆನ್ಸ್‌ದಾರರಾದ ರಾಜೇಶ್ ಶೆಟ್ಟಿಯವರು ಸೇರಿಕೊಂಡು ಅಕ್ರಮವಾಗಿ ಮದ್ಯ ಸ್ವಾದೀನತೆ ಹೊಂದಿ ಬಾರ್ & ರೆಸ್ಟೊರೆಂಟ್‌ಗೆ ಬರುತ್ತಿದ್ದ ಗ್ರಾಹಕರಿಗೆ ಮದ್ಯವನ್ನು ಸರಬರಾಜು ಮಾಡಲು ಅನುವು ಮಾಡಿ ಕೊಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 122/2026 ಕಲಂ: 32(2), 34, 36(1)(B) ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.
