ಮಣಿಪಾಲ: ದಿನಾಂಕ:02-10-2026 (ಹಾಯ್ ಉಡುಪಿ ನ್ಯೂಸ್) ಶಿವಳ್ಳಿ ಗ್ರಾಮದ ಎಂಐಟಿ ಕ್ಯಾಂಪಸ್ ನಲ್ಲಿರುವ ಮಾನವ ಸಂಪನ್ಮೂಲ ಕಂಪನಿಯೊಂದಕ್ಕೆ ಅದರ ಆರು ಜನ ನೌಕರರು ಸೇರಿಕೊಂಡು ಹನ್ನೆರಡು ಲಕ್ಷ ರೂಪಾಯಿ ವಂಚನೆ ನಡೆಸಿದ್ದಾರೆ ಎಂದು ಕಂಪೆನಿಯ ವ್ಯವಸ್ಥಾಪಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಮಾನವ ಸಂಪನ್ಮೂಲ ವ್ಯವಸ್ಥಾಪಕರಾಗಿರುವ ದಿವ್ಯ ಯತೀನ್ ಶೆಟ್ಟಿ (39) ಎಂಬವರು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಎಂಐಟಿ ಕ್ಯಾಂಪಸ್‌ನಲ್ಲಿರುವ Indeanta E-Mobility Pvt.Ltd ಎಂಬ ಕಂಪನಿಯನ್ನು ನಡೆಸಿಕೊಂಡಿದ್ದು ಈ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ 1.ಸಿದ್ದಮೂರ್ತಿ ಜಿ 2.ಶಿವರಾಜ್ ನಾಯಕ್ 3.ಸುದೀಪ್ 4.ಜಿತೇಶ್ ಎಲ್ ಕಾಂಚನ್ 5.ಎಮ್ ಬಿ ಅವಿನಾಶ್ 6.ಮುತ್ತಣ್ಣ ಅದಿನವರ್ ಎಂಬವರು ದಿನಾಂಕ 01/04/2026 ರಿಂದ ದಿವ್ಯ ಯತೀನ್ ಶೆಟ್ಟಿ ರವರ ಕಂಪನಿಗೆ ಬರಬೇಕಾದ ಪ್ರಯಾಣಿಕರ ಶುಲ್ಕವನ್ನು ನೀಡದೇ ದಿವ್ಯ ಯತೀನ್ ಶೆಟ್ಟಿ ರವರ ಕಂಪನಿಯ QR ಕೋಡ್ ನ್ನು ಬಳಸದೇ ವೈಯಕ್ತಿಕ ಮರ್ಚೆಂಟ್ QR ಕೋಡ್ ನ್ನು ಬಳಸಿ ಪ್ರಯಾಣಿಕರ ಶುಲ್ಕವನ್ನು ಸಂಗ್ರಹಿಸಿ ದಿವ್ಯ ಯತೀನ್ ಶೆಟ್ಟಿ ರವರ ಕಂಪನಿಗೆ ಬರಬೇಕಾದ 12,00,000/- ರೂ ಗಳನ್ನು ಮುತ್ತಣ್ಣ ಅದಿನವರ್ ರವರ ಹೆಂಡತಿ ಐಶ್ವರ್ಯ ಮುತ್ತಣ್ಣ ರವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡು ಒಟ್ಟು ಹಣವನ್ನು ಆರೋಪಿತರು ಹಂಚಿಕೊಂಡು ದಿವ್ಯ ಯತೀನ್ ಶೆಟ್ಟಿ ರವರ ಕಂಪನಿಗೆ ವಂಚನೆ ಮೋಸ ಹಾಗೂ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ದಿವ್ಯ ಯತೀನ್ ಶೆಟ್ಟಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 161/2026 ಕಲಂ: 316(4),318(2),(3),318(4) R/W 3(5) BNS ರಂತೆ ಪ್ರಕರಣ ದಾಖಲಾಗಿದೆ.
