ಹೆಬ್ರಿ: ದಿನಾಂಕ:03-10-2026 (ಹಾಯ್ ಉಡುಪಿ ನ್ಯೂಸ್) ವರಂಗ ಗ್ರಾಮದ ತಲಮನೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ನಡೆಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಹೆಬ್ರಿ ಪೊಲೀಸ್ ಠಾಣೆಯ ಪಿಎಸ್ಐ ಚಂದ್ರ ಎ.ಕೆ ಅವರು ಬಂಧಿಸಿದ್ದಾರೆ.
ಹೆಬ್ರಿ ಪೊಲೀಸ್ ಠಾಣೆಯ ಪಿಎಸ್ಐ ಚಂದ್ರ ಎ ಕೆ ರವರಿಗೆ ದಿನಾಂಕ: 29-09-2026 ರಂದು ವರಂಗ ಗ್ರಾಮದ ತಲಮನೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಹಣವನ್ನು ಪಣವಾಗಿಟ್ಟು ಕೋಳಿಗಳ ಕಾಲಿಗೆ ಹರಿತವಾದ ಕತ್ತಿಯನ್ನು ಕಟ್ಟಿ ಹಿಂಸಾತ್ಮಕವಾಗಿ ಕೋಳಿ ಅಂಕ ನಡೆಸುತ್ತಿದ್ದಾರೆ ಎಂಬುದಾಗಿ ದೊರೆತ ಮಾಹಿತಿ ಪ್ರಕಾರ ಕೂಡಲೇ ಸಿಬ್ಬಂದಿ ಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದ್ದಾರೆ .
ಪೊಲೀಸರು ದಾಳಿ ನಡೆಸಿದಾಗ ಸ್ಥಳದಲ್ಲಿದ್ದ ಅಶೋಕ ಮತ್ತು ಪ್ರಶಾಂತ ಎಂಬವರನ್ನು ಬಂಧಿಸಿ ವಶಕ್ಕೆ ಪಡೆದಿದ್ದು ಜೂಜಾಟಕ್ಕೆ ಬಳಸಿದ ಅಂದಾಜು ರೂ 8000/- ಬೆಲೆಯ 8 ಕೋಳಿ ಹುಂಜ , ಕೋಳಿ ಬಾಳು-2 ಹಾಗೂ ಕೈ ಚೀಲ 8 , ನಗದು ರೂ.1000-00 , ಕೋಳಿಗೆ ಕಟ್ಟಲು ಬಳಸಿದ ಹಗ್ಗ-6 , ಕೋಳಿಬಾಳನ್ನು ಕಟ್ಟಲು ಬಳಸಿದ 2 ಹಗ್ಗದ ತುಂಡನ್ನು ಸ್ಥಳದಲ್ಲಿ ಸ್ವಾಧೀನಪಡಿಸಿಕೊಂಡಿದ್ದಾರೆ.
ಆಟದಲ್ಲಿ ನಿರತರಾಗಿದ್ದ ಸುರೇಶ್ ಮುದ್ರಾಡಿ, ಪ್ರಭಾಕರ ಸುವರ್ಣ ಶೇಣೆರ ಬೆಟ್ಟು ,ಸಂತೋಷ್ ಪೂಜಾರಿ ಅಜೆಕಾರ್, ಸುರೇಶ್ ಮಾಳ , ಪ್ರಸನ್ನ ಮುದ್ರಾಡಿ, ನಾರಾಯಣ ಶೆಟ್ಟಿ ಹೆಬ್ರಿ , ಪವನ್ ಕಾಡುಹೊಳೆ , ಮಂಜುನಾಥ ಹಿರಿಯಡ್ಕ ಅನಿಲ್ ಪೆರ್ಡೂರು, ಕೌಶಿಕ ಮುದ್ರಾಡಿ , ನಿತೀನ್ ಹೆಬ್ರಿ , ಸುಮಿತ್ ಪೆರ್ಡೂರು , ಕರುಣಾಕರ ಶಿವಪುರ , ಸಂತೋಷ್ ವರಂಗ , ಶರತ್ ಪೆರ್ಡೂರು , ರಮಾನಂದ ಹರಿಖಂಡಿಗೆ , ಭಾಸ್ಕರ ಬಚ್ಚಪ್ಪು ರವಿ ರವರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 47/2026 ಕಲಂ: 87,93 KP ACT &11(1)(a) Prevention of cruelty animals act ರಂತೆ ಪ್ರಕರಣ ದಾಖಲಾಗಿದೆ.
