file_00000000e3648211b97429aac5309726.png
Spread the love

ಮಲ್ಪೆ: ದಿನಾಂಕ: 30/09/2026 (ಹಾಯ್ ಉಡುಪಿ ನ್ಯೂಸ್) ತೆಂಕನಿಡಿಯೂರು ಗ್ರಾಮದ ಲಕ್ಷ್ಮೀ ನಗರದ ಸರ್ಕಾರಿ ಹಾಡಿಯಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಅನೀಲ್ ಕುಮಾರ್ ಡಿ ಅವರು ದಾಳಿ ನಡೆಸಿ ಐದು ಜನರನ್ನು ಬಂಧಿಸಿದ್ದಾರೆ.

ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಅನೀಲಕುಮಾರ್‌ ಡಿ ಅವರು ದಿನಾಂಕ :29-09-2026 ರಂದು ಠಾಣಾ ಸರಹದ್ದಿನಲ್ಲಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು ತೆಂಕನಿಡಿಯೂರು ಗ್ರಾಮದ ಲಕ್ಷ್ಮಿನಗರದ 2 ನೇ ಕ್ರಾಸ್ ಬಳಿ ಮೂಡೆ ಉಗ್ಗೇದ ಸರಕಾರಿ ಹಾಡಿಯಲ್ಲಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಸುತ್ತಿರುವುದಾಗಿ ಮಾಹಿತಿ ಬಂದಿದ್ದು, ಕೂಡಲೇ ಪೊಲೀಸ್ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ಮಾಡಿದ್ದಾರೆ.

ದಾಳಿ ನಡೆಸಿದಾಗ ಕೆಲವರು ಓಡಿ ಹೋಗಿದ್ದು 1.ನಂದಕಿಶೋರ್‌, 2. ಶುಭತ್‌, 3.ಮಹೇಶ್‌, 4. ಆರ್ಥಿಕ್‌, 5. ಪಾಂಡುರಂಗ ನಾಯ್ಕ್‌ ಎಂಬವರನ್ನು ಹಿಡಿದು ಕೋಳಿ ಅಂಕಕ್ಕೆ ಉಪಯೋಗಿಸಿದ 3500/- ರೂಪಾಯಿ, 3 ಜೀವಂತ ಕೋಳಿಗಳು , ಕೋಳಿಯ ಕಾಲಿಗೆ ಕಟ್ಟಿದ ಬಾಳು (ಕತ್ತಿ)– 2, 4 ಮೊಬೈಲ್‌ ಪೋನ್‌, KA-20-EH-7511 ಮೋಟಾರ್‌ ಸೈಕಲ್‌ ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 108/2026 ಕಲಂ: 112 BNS, ಕಲಂ: 87, 93 ಕರ್ನಾಟಕ ಪೊಲೀಸ್ ಕಾಯ್ದೆ ಹಾಗೂ ಕಲಂ: 11(1) (ಎ) ಪ್ರಾಣಿ ಹಿಂಸೆ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.

error: No Copying!