file_00000000a39482119397cbb7f29c759a.png
Spread the love

ಉಡುಪಿ: ದಿನಾಂಕ:29-09-2026(ಹಾಯ್ ಉಡುಪಿ ನ್ಯೂಸ್) ನಗರದ ಹನುಮಾನ್ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿದ್ದ ಬಸ್ ಕಳ್ಳತನ ವಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕುಂದಾಪುರ,ಕಟ್ ಬೆಲ್ತೂರು ನಿವಾಸಿ ಕೃಷ್ಣ (51), ಎಂಬವರು KA-20-AD-1931 ನೇ ಶ್ರೀದುರ್ಗಾಂಬ ಬಸ್ಸಿನ ನಿರ್ವಾಹಕರಾಗಿದ್ದು ರಾಯಿನ್‌ ಉಚ್ಚಿಲ ಎಂಬವರು ಚಾಲಕರಾಗಿದ್ದು ದಿನಾಂಕ 28/09/2026 ರಂದು ರಾತ್ರಿ 9:48 ಗಂಟೆಗೆ ಹನುಮಾನ್‌ ಪೆಟ್ರೋಲ್‌ ಬಂಕ್‌ ಹಿಂದುಗಡೆ ನಿಲ್ಲಿಸಿದ್ದು 10 ಗಂಟೆಗೆ ಕ್ರಷ್ಣ ರವರು ಅಲ್ಲಿಂದ ಚಾಲಕರಾದ ರಾಯಿನ್‌ ರವರ ಜೊತೆ ಸ್ಕೂಟರ್‌ ನಲ್ಲಿ ಹೋಗಿರುತ್ತಾರೆ.

ದಿನಾಂಕ 29/09/2026 ರಂದು ಬೆಳಿಗ್ಗೆ ಎಂದಿನಂತೆ ಹನುಮಾನ್‌ ಪೆಟ್ರೋಲ್ ಬಂಕ್‌ ಗೆ ಬಂದಾಗ ಬಂಕ್‌ನಲ್ಲಿ ನಿಲ್ಲಿಸಿದ್ದ ಬಸ್‌ ಕಾಣುತ್ತಿರಲಿಲ್ಲ. ಯಾರೋ ಅಪರಿಚಿತ ಇಬ್ಬರು ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಬಂದು ನಿಲ್ಲಿಸಿದ್ದ ಬಸ್ಸ್‌ನ್ನು ಕದ್ದುಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಕ್ರಿಷ್ಣ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 132/2026 ಕಲಂ: 303(2) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!