IMG_20260928_131141.png
Spread the love

ಕುಂದಾಪುರ: ದಿನಾಂಕ 28/09/2026 (ಹಾಯ್ ಉಡುಪಿ ನ್ಯೂಸ್) ಬಗ್ವಾಡಿ ಕ್ರಾಸ್ ನಲ್ಲಿರುವ ಬಾರ್ ಎಂಡ್ ರೆಸ್ಟೋರೆಂಟ್ ಒಂದರಲ್ಲಿ ವ್ಯಕ್ತಿ ಯೋರ್ವರಿಗೆ ನಾಲ್ಕು ಜನರ ತಂಡವೊಂದು ಹಲ್ಲೆ ನಡೆಸಿರುವ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕುಂದಾಪುರ ,ದೇವಲ್ಕುಂದ ಗ್ರಾಮದ ನಿವಾಸಿ ದಿನೇಶ್‌ ಲೂವಿಸ್‌ (36) ಎಂಬವರು ದಿನಾಂಕ:26-09-2026 ರಂದು ರಾತ್ರಿ ಬಗ್ವಾಡಿ ಕ್ರಾಸ್‌ ನಲ್ಲಿರುವ N.T.S ಪ್ಯಾಲೆಸ್‌ ಬಾರ್‌ ಅಂಡ್‌ ರೆಸ್ಟೋರೆಂಟ್‌ ನಲ್ಲಿ ಊಟಕ್ಕೆ ಕುಳಿತುಕೊಂಡಿರುವಾಗ ಪಕ್ಕದ ಟೇಬಲ್‌ ನಲ್ಲಿ ಅವರ  ಪರಿಚಯದವರಾದ ಸಚಿನ್‌, ರಜತ್‌, ಶ್ರೀಕಾಂತ್‌ ಶೆಟ್ಟಿ ಮತ್ತು ಮಂಜು ಶೆಟ್ಟಿ ಎಂಬುವವರು ಕುಳಿತು ಊಟ ಮಾಡುತ್ತಿದ್ದು ಜೋರಾದ ಧ್ವನಿಯಲ್ಲಿ ಮಾತನಾಡುತ್ತಿದ್ದು, ದಿನೇಶ್ ಲೂವಿಸ್ ರು ರಾತ್ರಿ 08:45 ಗಂಟೆಗೆ ಅವರಿಗೆ ನೀವು ಈ ರೀತಿ ಕೂಗಾಡುತ್ತಿದ್ದರೆ ನಮಗೆಲ್ಲ ತೊಂದರೆ ಆಗುತ್ತದೆ ಸ್ವಲ್ಪ ನಿಧಾನಕ್ಕೆ ಮಾತನಾಡುವಂತೆ ಹೇಳಿದ್ದಕ್ಕೆ ದಿನೇಶ್ ಲೂವಿಸ್ ರನ್ನುದ್ದೇಶಿಸಿ ರಜತ್‌ ಎಂಬುವವನು ನಮಗೆ ಹೇಳಲು ನೀನ್ಯಾರು ಎಂದು ಅವಾಚ್ಯ ಶಬ್ಧದಿಂದ ಬೈದು ಕೈಯಿಂದ ದೂಡಿದ್ದು, ಆಗ ಸಚಿನ್‌ ನು ಸೋಡಾ ಬಾಟಲಿಯಿಂದ ದಿನೇಶ್ ಲೂವಿಸ್ ರ ತಲೆಗೆ ಹೊಡೆದಿದ್ದು ,ಬಾಟಲಿ ಒಡೆದು ದಿನೇಶ್ ಲೂವಿಸ್ ರ ತಲೆಗೆ ಮತ್ತು ಬಾಟಲಿ ಚೂರುಗಳು ಎಡ ಕೆನ್ನೆಗೆ ತಾಗಿ ಗಾಯವಾಗಿ ರಕ್ತ ಬಂದಿರುತ್ತದೆ.

ಆ ಸಮಯ ಶ್ರೀಕಾಂತ್‌ ಶೆಟ್ಟಿ ಮತ್ತು ಮಂಜು ಶೆಟ್ಟಿ ದಿನೇಶ್ ಲೂವಿಸ್ ರಿಗೆ ಕೈಯಿಂದ ಹೊಡೆದು, ಕಾಲಿನಿಂದ ತುಳಿದಿರುತ್ತಾರೆ. ಆಗ ಬಾರ್‌ ನ ಕೌಂಟರ್‌ ನಲ್ಲಿದ್ದವರು ಮತ್ತು ಅಕ್ಕಪಕ್ಕದವರು ಬಂದು ಹೊಡೆಯದಂತೆ ತಡೆದಿರುತ್ತಾರೆ. ನಂತರ ಆಪಾದಿತರು ದಿನೇಶ್ ಲೂವಿಸ್ ರನ್ನುದ್ದೇಶಿಸಿ ಅವಾಚ್ಯ ಶಬ್ಧಗಳಿಂದ ಬೈದು ಬೆದರಿಕೆ ಹಾಕಿ ಅಲ್ಲಿಂದ ಹೋಗಿರುತ್ತಾರೆ.ದಿನೇಶ್ ಲೂವಿಸ್ ರನ್ನು ಅಲ್ಲಿ ಸೇರಿದ್ದ ಜನರು ಚಿಕಿತ್ಸೆ ಬಗ್ಗೆ ಕುಂದಾಪುರದ ಸರಕಾರಿ ಅಸ್ಪತ್ರೆಗೆ ಕರೆದು ಕೊಂಡು ಬಂದಿದ್ದು ಪರೀಕ್ಷಿಸಿದ ವೈದ್ಯಾಧಿಕಾರಿಯವರು ಹೆಚ್ಚಿನ ಚಿಕಿತ್ಸೆ ಬಗ್ಗೆ ಬೇರೆ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ ಮೇರೆಗೆ ದಿನೇಶ್ ಲೂವಿಸ್ ರು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ದಿನೇಶ್ ಲೂವಿಸ್ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 54/2026 ಕಲಂ:115(2), 118(1),352,351(2) ಜೊತೆಗೆ 3(5)BNS ರಂತೆ ಪ್ರಕರಣ ದಾಖಲಾಗಿದೆ.

error: No Copying!