IMG_20260927_205926.png
Spread the love

ಬೈಂದೂರು: ದಿನಾಂಕ: 27-09-2026(ಹಾಯ್ ಉಡುಪಿ ನ್ಯೂಸ್) ಕಿರಿ ಮಂಜೇಶ್ವರ ಗ್ರಾಮದ ಸುಲಕ್ಷಣ ಟ್ರೇಡರ್ಸ್ ಕಟ್ಟಡದ ಸಮೀಪ ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿಯನ್ನು ಬೈಂದೂರು ಪೊಲೀಸ್ ಠಾಣೆಯ ಪಿಎಸ್ಐ ಸುನೀಲ್ ಕುಮಾರ್ ಬಿ ಎನ್  ಅವರು ಬಂಧಿಸಿದ್ದಾರೆ.

ಬೈಂದೂರು ಪೊಲೀಸ್ ಠಾಣೆಯ ಪಿಎಸ್ಐ ಸುನೀಲ್ ಕುಮಾರ್ ಬಿ ಎನ್ ಅವರಿಗೆ ದಿನಾಂಕ 26-09-2026 ರಂದು ಬೈಂದೂರು ತಾಲೂಕು ಕಿರಿಮಂಜೇಶ್ವರ ಗ್ರಾಮದ ಸುಲಕ್ಷಣ ಟೇಡರ್ಸ್‌ ಕಟ್ಟಡದ ಸಮೀಪ ಖಾಲಿ  ಜಾಗದಲ್ಲಿ ಮಟ್ಕಾ ಜುಗಾರಿ ಆಟ ಆಡುತ್ತಿದ್ದ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದ ಮೇರೆಗೆ ಕೂಡಲೇ ಸುನೀಲ ಕುಮಾರ್‌ ಅವರು ಠಾಣೆಯ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಅಲ್ಲಿ ಮಟ್ಕಾ  ಜುಗಾರಿ  ಜುಗಾರಿ ಆಟ ನಡೆಸುತ್ತಿದ್ದ ಆಪಾದಿತ ಸುಬ್ಬ ಪೂಜಾರಿ(70) ಎಂಬವರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತರ ವಶದಲ್ಲಿದ್ದ ಮಟ್ಕಾ ಜುಗಾರಿ ಆಟಕ್ಕೆ ಬಳಸಿದ್ದ 1] ನಗದು ರೂ.220/- 2]  ಮಟ್ಕಾ ನಂಬ್ರ ಬರೆದ  ಚೀಟಿ-1, 3] ಒಂದು ಬಾಲ್ ಪೆನ್-1 ನ್ನು  ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ: 125/2026 ಕಲಂ: 78 (1) (3)  KP Act  ರಂತೆ ಪ್ರಕರಣ ದಾಖಲಾಗಿದೆ.

error: No Copying!