IMG_20260927_174302.png
Spread the love

ಕಾರ್ಕಳ: ದಿನಾಂಕ:27-09-2026(ಹಾಯ್ ಉಡುಪಿ ನ್ಯೂಸ್) ಇರ್ವತ್ತೂರು ಗ್ರಾಮದ ಕೆಂಪು ಗುಡ್ಡೆ ಎಂಬಲ್ಲಿ ಕೋಳಿ ಅಂಕ ಜೂಜಾಟ ನಡೆಸುತ್ತಿದ್ದ ಐವರು ವ್ಯಕ್ತಿ ಗಳನ್ನು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ನವೀನ್ ಪಿ ಬೋರ್ಕರ್ ಅವರು ಬಂಧಿಸಿದ್ದಾರೆ.

ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ನವೀನ್‌ ಪಿ ಬೋರ್ಕರ್‌ ಅವರಿಗೆ ದಿನಾಂಕ 25-09-2026  ರಂದು ಕಾರ್ಕಳ ತಾಲೂಕು ಇರ್ವತ್ತೂರು  ಗ್ರಾಮದ ಕೆಂಪುಗುಡ್ಡೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹುಂಜ ಕೋಳಿಗಳ  ಕಾಲುಗಳಿಗೆ ಹಿಂಸಾತ್ಮಕವಾಗಿ ಬಾಳುಕತ್ತಿಯನ್ನು ಕಟ್ಟಿ ,ಹಣವನ್ನು ಪಣವಾಗಿ ಇಟ್ಟು ಕಾದಾಟಕ್ಕೆ ಬಿಟ್ಟು ಜೂಜಾಟ ಆಡುತ್ತಿದ್ದಾರೆಂದು ಸಾರ್ವಜನಿಕರಿಂದ ಖಚಿತ  ಮಾಹಿತಿ ಬಂದಿದ್ದು, ಕೂಡಲೇ ಸಿಬ್ಬಂದಿಯವರ ಸಹಾಯದಿಂದ ಮಾಹಿತಿ ಬಂದ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.

ಸ್ಥಳದಲ್ಲಿ ಅಪಾದಿತರು ಕೋಳಿ ಅಂಕ ಜೂಜಾಟಕ್ಕೆ ಬಳಸಿದ  ಹುಂಜ ಕೋಳಿ-1, ನಗದು ರೂ: 1600/, ಬಾಳು ಕತ್ತಿ-02, ಹುಂಜಾ ಕೋಳಿಗಳ ಕಾಲಿಗೆ ಕಟ್ಟಿದ ಹಗ್ಗ-2, ಹುಂಜಾ ಕೋಳಿಗಳ ಕಾಲಿಗೆ ಬಾಲು ಕಟ್ಟಿದ ಹಗ್ಗ-2 ಇವುಗಳನ್ನು  ಸ್ವಾಧೀನಪಡಿಸಿಕೊಂಡಿದ್ದು  ಅಪಾದಿತ 1) ಸುನಿಲ್‌ ಡಿ ಸೊಜಾ(39) ಮಿಯ್ಯಾರು ಗ್ರಾಮ ಕಾರ್ಕಳ ತಾಲೂಕು 2) ಹರೀಶ್‌ ಭಂಡಾರಿ (54) ಮಿಯ್ಯಾರು ಗ್ರಾಮ,  ಕಾರ್ಕಳ 3} ಶ್ರೀನಿವಾಸ (38) ರೆಂಜಾಳ ಗ್ರಾಮ ಕಾರ್ಕಳ 4} ರಾಜೇಶ (31) ಮಾರ್ಪಾಡಿ ಗ್ರಾಮ, ಮಂಗಳೂರು 5} ಅರುಣ ಇರ್ವತ್ತೂರು ಇವರುಗಳನ್ನು ಬಂಧಿಸಿದ್ದಾರೆ.

ಅಪಾದಿತರ ವಿರುದ್ದ  ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ: 79/2026 ಕಲಂ: 87, 93 K.P. Act & U/s 11(1)(n) Prevention of cruelty animals act 1960  ರಂತೆ ಪ್ರಕರಣ ದಾಖಲಾಗಿದೆ.

error: No Copying!