ಉಡುಪಿ: ನಗರದ ಸರ್ವಿಸ್ ಬಸ್ ನಿಲ್ದಾಣದ ಬಳಿ ನಿಂತಿದ್ದ ಯುವಕನೋರ್ವನಿಗೆ ಯುವಕರ ತಂಡವೊಂದು ಚೂರಿಯಿಂದ ಗಂಭೀರ ಹಲ್ಲೆ ನಡೆಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಪು, ಮೂಳೂರು,ಫಿಶರೀಸ್ ರೋಡ್ ನಿವಾಸಿ ಸಾತ್ವಿಕ್ (16) ಎಂಬವರು ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದು ದಿನಾಂಕ 17/09/2026 ರಂದು ಬ್ರಹ್ಮಾವರದಲ್ಲಿ ಹುಲಿವೇಷ ಸ್ಪರ್ಧೆ ಇದ್ದು ಅಲ್ಲಿಗೆ ಹೋಗಲೆಂದು ಸಂಜೆ 6:00 ಗಂಟೆಗೆ ಮನೆಯಿಂದ ಹೊರಟು ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿ ಸ್ನೇಹಿತನಾದ, ರಾಹುಲ್ ಎಂಬಾತನು ಬರುವ ಹಾದಿ ಕಾಯುತ್ತಾ ನಿಂತಿರುವ ಸಮಯ ಅಲ್ಲಿ ಕೆಲವೊಂದು ಹುಡುಗರು ನಿಂತಿದ್ದು ಅವರಲ್ಲಿ ಒಬ್ಬ ಅವರ ಬಳಿ ಬಂದು ಭುಜಕ್ಕೆ ತಾಗಿಕೊಂಡು ಹೋಗಿದ್ದು ಈ ಬಗ್ಗೆ ಸಾತ್ವಿಕ್ ನು ಅವನ ಬಳಿ ಕ್ಷಮೆ ಕೇಳಿ ಮುಂದೆ ಹೋಗಿರುತ್ತಾರೆ.
ನಂತರ ಸಂಜೆ ಸಮಯ ಸುಮಾರು 07:01 ಗಂಟೆಗೆ ಅ ಹುಡುಗರು ಪುನಃ ಸಾತ್ವಿಕ್ ರ ಬಳಿ ಬಂದು ಅವರಲ್ಲಿ ಒಬ್ಬನು ಏಕಾಎಕಿ ಕೈಯಿಂದ ದೂಡಿ ಹಲ್ಲೆಗೆ ಮುಂದಾಗಿದ್ದು ಅಗ ಸಾತ್ವಿಕ್ ರು ಅವನ ಬಳಿ ನನಗೆ ಯಾಕೆ ಹಲ್ಲೆ ಮಾಡುತ್ತೀ ಎಂದು ಕೇಳಿದಾಗ ಅವನು ಪುನಃ ಹಲ್ಲೆ ಮಾಡಿ ತಲೆಗೆ ಕೈಗೆ ಹಲ್ಲೆ ಮಾಡಿರುತ್ತಾನೆ.
ನಂತರ ಮುಂದುವರಿದು ಕೊಲೆ ಮಾಡುವ ಉದ್ದೇಶದಿಂದ ಅವನ ಸೊಂಟದಲ್ಲಿದ್ದ ಚೂರಿಯನ್ನು ತೆಗೆದು ತಲೆಗೆ ಹಾಗೂ ಮುಖಕ್ಕೆ ಹಲ್ಲೆ ಮಾಡಿದ್ದು ಇದರ ಪರಿಣಾಮ ತಲೆ ಮತ್ತು ಮುಖದಲ್ಲಿ ರಕ್ತಗಾಯವಾಗಿರುತ್ತದೆ.
ನಂತರ ಹಲ್ಲೆ ಮಾಡಿದ ಹುಡುಗರು ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದು ಅಲ್ಲಿಂದ ಓಡಿಹೋಗಿರುತ್ತಾರೆ. ನಂತರ ಸಾತ್ವಿಕ್ ರವರನ್ನು ಗೆಳೆಯನು ಮೋಟಾರು ಸೈಕಲ್ ನಲ್ಲಿ ಚಿಕಿತ್ಸೆಯ ಬಗ್ಗೆ ಜಿಲ್ಲಾ ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಸಾತ್ವಿಕ್ ತಿಳಿಸಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 128/2026 ಕಲಂ: 115(2) 118(2), 352, 351(2) 109̤ 3(5) BNS & 75 JJ act ರಂತೆ ಪ್ರಕರಣ ದಾಖಲಾಗಿದೆ.

