HSfx0pvaoAAgVcU.jpg
Spread the love

ಮಂಗಳೂರು: ದಿನಾಂಕ:18-09-2026 (ಹಾಯ್ ಉಡುಪಿ ನ್ಯೂಸ್) ತುಳು ಭಾಷೆಗೆ ಐತಿಹಾಸಿಕ ಗೌರವ – ತುಳು ಭಾಷೆ ಯನ್ನು ಕರ್ನಾಟಕದ 2ನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಇಂದು ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರು ಘೋಷಣೆ ಮಾಡುವ ಮೂಲಕ ಬಹು ಕಾಲದ ಕರಾವಳಿಯ ತುಳು ಜನರ ಬೇಡಿಕೆಯನ್ನು ಈಡೇರಿಸಿದ್ದಾರೆ.

ತುಳು ಕೇವಲ ಒಂದು ಭಾಷೆಯಲ್ಲ, ಕರಾವಳಿಯ ಶ್ರೀಮಂತ ಸಂಸ್ಕೃತಿ, ಪರಂಪರೆ ಹಾಗೂ ಅಸ್ಮಿತೆಯ ಜೀವನಾಡಿ. ತುಳು ಭಾಷೆಯ ಐತಿಹಾಸಿಕ ಮಹತ್ವವನ್ನು ಗೌರವಿಸಿ, ಕರ್ನಾಟಕ ಸರ್ಕಾರ ರಾಜ್ಯದ 2ನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ತುಳುವನ್ನು ಘೋಷಿಸಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಅನ್ವಯವಾಗುವಂತೆ ತೀರ್ಮಾನಿಸಲಾಗಿದೆ. ಈ ಮೂಲಕ ಕರಾವಳಿ ಜನರ ಬಹುದಿನಗಳ ಕನಸು ನನಸಾಗಿದೆ ಎಂದು ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರು ಹೇಳಿದರು.

error: No Copying!