file_00000000d1c08211a088f994cb516771.png
Spread the love

ಕೋಟ: ದಿನಾಂಕ 15.09.2026 (ಹಾಯ್ ಉಡುಪಿ ನ್ಯೂಸ್) ದೇವಸ್ಥಾನಕ್ಕೆ ಪೂಜೆಗೆ ತೆರಳಿದ್ದ ವ್ರಧ್ಧ ಮಹಿಳೆ ಯೋರ್ವರ ಕರಿಮಣಿ ಸರವನ್ನು ಯಾರೋ ಕಳ್ಳರು ಕದ್ದ ಘಟನೆ ಕೋಟದಲ್ಲಿ ನಡೆದಿದೆ. ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಬ್ರಹ್ಮಾವರ ಮಣೂರು ಗ್ರಾಮದ ನಿವಾಸಿ ಬೇಬಿ ಶೆಡ್ತಿ (72) ಎಂಬವರು  ದಿನಾಂಕ:14-09-2026 ರಂದು ಕೋಟ   ಶ್ರೀ ಅಮೃತೇಶ್ಚರಿ ದೇವಸ್ಥಾನಕ್ಕೆ ಮಧ್ಯಾಹ್ನ ಸುಮಾರು 12:15  ಘಂಟೆಗೆ ಹೋಗಿ ಪೂಜೆ ಕಾರ್ಯ ಮುಗಿಸಿ ಸುಮಾರು 12:30 ಘಂಟೆಗೆ  ದೇವಸ್ಥಾನದ ಹೊರಗಡೆ ಬಂದು ನೋಡಿದಾಗ  ಕುತ್ತಿಗೆಯಲ್ಲಿ ಇದ್ದ ಸುಮಾರು 24  ಗ್ರಾಂ ತೂಕದ ಕರಿಮಣಿ  ಸರ ಇರಲಿಲ್ಲ. ಯಾರೋ ಕಳ್ಳರು ಮಧ್ಯಾಹ್ನ ಸುಮಾರು 12:15  ಘಂಟೆಯಿಂದ 12:30 ಘಂಟೆಯ  ಮದ್ಯದ  ಅವಧಿಯಲ್ಲಿ  ದೇವಸ್ಥಾನದ ಒಳಗಡೆ  ಬೇಬಿ ಶೆಡ್ತಿ ರವರ  ಕುತ್ತಿಗೆಯಲ್ಲಿ ಇದ್ದ ಸುಮಾರು  3,00,000/- ರೂ  ಮೌಲ್ಯದ 24 ಗ್ರಾಂ  ತೂಕದ ಕರಿಮಣಿ ಸರವನ್ನು ಎಳೆದು ಸುಲಿಗೆ ಮಾಡಿಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ: 142/2026 ಕಲಂ: 304 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!