ಉಡುಪಿ: ದಿನಾಂಕ:15-09-2026(ಹಾಯ್ ಉಡುಪಿ ನ್ಯೂಸ್)ನಗರದ ಕಲ್ಸಂಕ ಸಿಗ್ನಲ್ ನಲ್ಲಿ ಸಿಟಿ ಬಸ್ ನಿಲ್ದಾಣದ ಕಡೆಯಿಂದ ಬಂದು ಗುಂಡಿ ಬೈಲ್ ಕಡೆಗೆ ತಿರುಗುವ ಕಲ್ಸಂಕ ಜಂಕ್ಷನ್ ನ ಎಡ ಬದಿಯಲ್ಲಿ ಡಾಮಾರು ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡ ಗಳಾಗಿವೆ.
ಈ ಹೊಂಡಗಳಾಗಿ ಹಲವಾರು ದಿನಗಳಾಗಿವೆ.ವಾಹನ ಸವಾರರು ಹೊಂಡದಲ್ಲಿ ಎದ್ದು,ಬಿದ್ದು ನಗರ ಸಭೆಗೆ ಶಾಪ ಹಾಕುತ್ತಾ ಸಾಗುತ್ತಿದ್ದಾರೆ. ಮೊದಲೇ ಸಿಗ್ನಲ್ ವ್ಯವಸ್ಥೆ ಸರಿ ಇಲ್ಲ, ಫ್ರೀ ಲೆಫ್ಟ್ ಎಂಬುದು ಹೆಸರಿಗೆ ಮಾತ್ರ! ಸಿಗ್ನಲ್ ಗ್ರೀನ್ ಲೈಟ್ ಆನ್ ಆದೊಡನೆ ತರಾತುರಿಯಲ್ಲಿ ವಾಹನ ಚಲಾಯಿಸುವ ಭರದಲ್ಲಿ ಈ ಹೊಂಡದಲ್ಲಿ ಬಿದ್ದು ಏಳುವುದು, ವಾಹನಗಳು ಗುದ್ದುವುದು ಇದೀಗ ಮಾಮೂಲಿಯಾಗಿವೆ. ದ್ವಿಚಕ್ರ, ತ್ರಿಚಕ್ರ,ಸಣ್ಣ ವಾಹನಗಳಿಗೆ ಈ ಜಂಕ್ಷನ್ ನ ಹೊಂಡಗಳು ಅಪಾಯಕಾರಿಯಾಗಿ ಪರಿಣಮಿಸುತ್ತಿವೆ.
ರಸ್ತೆ ಹೊಂಡವನ್ನು ಮುಚ್ಚಿ ದುರಸ್ತಿ ಪಡಿಸಬೇಕಾದ ಉಡುಪಿ ನಗರ ಸಭೆಯ ಅಧಿಕಾರಿಗಳಿಗೆ ಈ ಹೊಂಡಗಳು ಕಾಣಿಸದೆ ಇರುವ ಕಾರಣ ಇನ್ನು ಮುಂದಿನ ದಿನಗಳಲ್ಲಿ ವಾಹನ ಸವಾರರ ಕಷ್ಟ ಕಂಡು ಟ್ರಾಫಿಕ್ ಪೊಲೀಸರೇ ಈ ಹೊಂಡಗಳನ್ನು ಮುಚ್ಚ ಬೇಕೋ ಏನೋ?
ಉಡುಪಿಯಲ್ಲಿ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಯಾರೂ ಪ್ರತಿಭಟನೆ ಮಾಡುವುದಿಲ್ಲ ಎಂದು ತಿಳಿದು ಜಡ ಹಿಡಿದಿರುವ ನಗರಾಡಳಿತ ಇನ್ನಾದರೂ ಎಚ್ಚೆತ್ತು ಕೊಳ್ಳಲಿ.ಇನ್ನು ಮುಂದಿನ ದಿನಗಳಲ್ಲಿ ವಾಹನ ಸವಾರರಿಗೆ ಪ್ರಾಣಾಪಾಯ ಸಂಭವಿಸುವ ಮೊದಲು ಕಲ್ಸಂಕ ಜಂಕ್ಷನ್ ನ ರಸ್ತೆ ಗುಂಡಿಗಳನ್ನು ಕೂಡಲೇ ಮುಚ್ಚ ಬೇಕೆಂಬುದು ಜನಾಗ್ರಹವಾಗಿದೆ.


