ಪಡುಬಿದ್ರಿ: ದಿನಾಂಕ:12-09-2026(ಹಾಯ್ ಉಡುಪಿ ನ್ಯೂಸ್) ಸಾಂತೂರು ಸುಬ್ರಹ್ಮಣ್ಯ ದೇವಸ್ಥಾನದ ಪರಿಸರದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಲ್ಲು ಕ್ರಷರ್ ಗೆ ಪಡುಬಿದ್ರಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸಕ್ತಿವೇಲು.ಇ.ಅವರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಾದ ಪ್ರಭಾಕರ ಶೆಟ್ಟಿ ಹಾಗೂ ಇತರರು ಜೊತೆಯಾಗಿ ಅಕ್ರಮವಾಗಿ ಲಾಭ ಮಾಡುವ ಉದ್ದೇಶದಿಂದ ಸರಕಾರಕ್ಕೆ ರಾಜಸ್ವವನ್ನು ಭರಿಸದೇ ಎಲ್ಲಿಂದಲೋ ಸರಕಾರಿ ಜಾಗದಿಂದ ಪಾದೆ ಕಲ್ಲನ್ನು ಕಳವು ಮಾಡಿ ಕ್ರಷರಿಗೆ ತಂದು ಕ್ರಷರ್ ಮುಖಾಂತರ ಜೆಲ್ಲಿ ಮಾಡಿ ಮಾರಾಟ ಮಾಡಲು ಕಾಪು ತಾಲೂಕು ಸಾಂತೂರು ಗ್ರಾಮದ ಕಾಂಜಾರಕಟ್ಟೆಯಿಂದ ಬೆಳ್ಮಣ್ ಕಡೆಗೆ ಹೋಗುವ ರಾಜ್ಯ ಹೆದ್ದಾರಿ 01 ರ ರಸ್ತೆಯ 500 ಮೀಟರ್ ಉತ್ತರಕ್ಕೆ ಸಾಂತೂರು ಸುಬ್ರಮಣ್ಯ ದೇವಸ್ಥಾನದ ಕಡೆಗೆ ಹೋಗುವ ಕಚ್ಚಾ ರಸ್ತೆಯ ಬಲಬದಿಯಲ್ಲಿರುವ ಕ್ರಷರ್‌ನಲ್ಲಿ ಇರಿಸಿದ್ದ ಬಗ್ಗೆ ಸಕ್ತಿವೇಲು ಇ, ಪೊಲೀಸ್ ಉಪನಿರೀಕ್ಷಕರು (ಕಾ & ಸು), ಪಡುಬಿದ್ರಿ ಪೊಲೀಸ್ ಠಾಣೆ ಇವರು ದಿನಾಂಕ 11/09/2026 ರಂದು ದಾಳಿ ಮಾಡಿ ಸ್ಥಳದಲ್ಲಿ ಇದ್ದ 40 ಯುನಿಟ್ನಷ್ಟು ಜೆಲ್ಲಿ, ಎರಡು ಲಾರಿ ಹಾಗೂ ಒಂದು ಜೆ ಸಿ ಬಿ ವಾಹನವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 103/2026 ಕಲಂ: 112, 303(2) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.
