IMG_20260911_173847.jpg
Spread the love

ಉಡುಪಿ: ದಿನಾಂಕ:11-09-2026(ಹಾಯ್ ಉಡುಪಿ ನ್ಯೂಸ್) ವಿದೇಶದಲ್ಲಿ ಉದ್ಯೋಗ ದೊರಕಿಸಿ ಕೊಡುವುದಾಗಿ ನಂಬಿಸಿ ಸುಬ್ರಹ್ಮಣ್ಯ ನಗರದ ಯುವಕನೋರ್ವನಿಗೆ ನಾಲ್ವರು ಆರೋಪಿಗಳು 5.73 ಲಕ್ಷ ರೂಪಾಯಿ ವಂಚನೆ ನಡೆಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸುಬ್ರಹ್ಮಣ್ಯ ನಗರ, ಪುತ್ತೂರು ನಿವಾಸಿ ಪುಷ್ಪರಾಜ್‌ ಶೆಟ್ಟಿ ಎಂಬವರು ಉದ್ಯೋಗ ಹುಡುಕುತ್ತಿದ್ದ ಸಂದರ್ಭದಲ್ಲಿ 1ನೇ ಆರೋಪಿತೆ ಆಶ್ಲೆ ಕರ್ನೇಲಿಯೋ ದಿನಾಂಕ 12/02/2025 ರಂದು ಸಂಪರ್ಕಿಸಿ, ಯು.ಕೆ. ದೇಶದಲ್ಲಿ ಹೌಸ್ ಕೀಪಿಂಗ್ ಸೂಪರ್‌ವೈಸರ್ ಉದ್ಯೋಗವಿದ್ದು, ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿರುತ್ತಾಳೆ. ನಂತರ ತನ್ನ ಸಹಾಯಕಿಯಾದ 2ನೇ ಆರೋಪಿ ಸವಿತಾ ಅವರ ಮೊಬೈಲ್ ಸಂಖ್ಯೆಯನ್ನು ನೀಡಿರುತ್ತಾಳೆ.

ಪುಷ್ಪರಾಜ್ ಶೆಟ್ಟಿಯವರು 2ನೇ ಆರೋಪಿಯನ್ನು ಸಂಪರ್ಕಿಸಿದಾಗ, ಯು.ಕೆ. ವೀಸಾ ಪ್ರಕ್ರಿಯೆಗಾಗಿ 1,00,000/- ಪ್ರೊಸೆಸಿಂಗ್ ಶುಲ್ಕ ಪಾವತಿಸುವಂತೆ ತಿಳಿಸಿದ್ದು, ದಿನಾಂಕ: 17/03/2025 ರಂದು ಪುಷ್ಪರಾಜ್ ಶೆಟ್ಟಿ ರವರು 2ನೇ ಆರೋಪಿಯ ಬ್ಯಾಂಕ್ ಆಫ್ ಬರೋಡ ಖಾತೆಗೆ 2,00,000/- ಜಮಾ ಮಾಡಿರುತ್ತಾರೆ. 3ನೇ ಆರೋಪಿ ಪ್ರಕೃತಿ ಮತ್ತು 4ನೇ ಆರೋಪಿ ಪ್ರಶಾಂತ್ ರವರು 1ನೇ ಮತ್ತು 2ನೇ ಆರೋಪಿತರೊಂದಿಗೆ ಸೇರಿ ಮೆಡಿಕಲ್ ಪರೀಕ್ಷೆ, ವೀಸಾ ಸ್ಟಾಂಪಿಂಗ್ ಹಾಗೂ ಎಂಬಸಿ ಪ್ರೊಸೆಸಿಂಗ್ ಹೆಸರಿನಲ್ಲಿ ಹಂತ ಹಂತವಾಗಿ ಹಣ ಪಡೆದುಕೊಂಡಿದ್ದು, ಒಟ್ಟು 5,73,000/- ಹಣ ಹಾಗೂ ಪಾಸ್‌ಪೋರ್ಟ್ ಪಡೆದಿರುತ್ತಾರೆ.ನಂತರ ಆರೋಪಿತರು ವೀಸಾ ತಿರಸ್ಕೃತವಾಗಿದೆ ಎಂದು ಹೇಳಿ ಹಣ ಹಾಗೂ ಪಾಸ್‌ಪೋರ್ಟ್ ವಾಪಸು ನೀಡುವುದಾಗಿ ತಿಳಿಸಿದ್ದರೂ, ಬಳಿಕ ಫೋನ್ ಸಂಪರ್ಕ ಕಡಿತಗೊಳಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿರುತ್ತಾರೆ. ಆರೋಪಿಗಳು ಪುಷ್ಪರಾಜ್ ಶೆಟ್ಟಿ ಯವರಿಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮೋಸ ಹಾಗೂ ವಂಚನೆ ಎಸಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಪುಷ್ಪರಾಜ್ ಶೆಟ್ಟಿ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 122/2026, ಕಲಂ: 316(2), 318 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!