IMG_20260911_170228.jpg
Spread the love

ದಿನಾಂಕ:11-09-2026(ಹಾಯ್ ಉಡುಪಿ ನ್ಯೂಸ್)

ಉಡುಪಿ ಬಿಷಪ್‌ ರೆವರೆಂಡ್ ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರು ರೋಮ್‌ನಲ್ಲಿ ಪೋಪ್ ಲಿಯೋ XIV ಅವರನ್ನು ಭೇಟಿಯಾದರು.

ಉಡುಪಿಯ ಬಿಷಪ್‌ ಮೋಸ್ಟ್ ರೆವ. ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರು 2026ರ ಸೆಪ್ಟೆಂಬರ್ 10ರಂದು ವ್ಯಾಟಿಕನ್‌ನಲ್ಲಿ ಪೋಪ್ ಲಿಯೋ XIV ಅವರನ್ನು ಭೇಟಿಯಾದರು.

ಐದು ಖಂಡಗಳಿಂದ ಆಗಮಿಸಿದ್ದ ಸುಮಾರು 147 ನೂತನವಾಗಿ ನೇಮಕಗೊಂಡ ಬಿಷಪ್‌ಗಳಿಗಾಗಿ ನಡೆದ ಒಂಬತ್ತು ದಿನಗಳ ತರಬೇತಿ ಕಾರ್ಯಕ್ರಮದ ಸಮಾರೋಪದ ನಂತರ ಈ ಭೇಟಿ ನಡೆಯಿತು.

ಬಿಷಪ್‌ ಅವರು ಉಡುಪಿ ಧರ್ಮಪ್ರಾಂತ್ಯದ ಪೋಷಕಿಯಾದ ‘ಅವರ್ ಲೇಡಿ ಆಫ್ ಮಿರಾಕಲ್ಸ್’ (ಪವಾಡ ಮಾತೆ) ಅವರ ಪ್ರತಿಮೆಯನ್ನು ಸ್ಮರಣಿಕೆಯಾಗಿ ಪೋಪ್ ಅವರಿಗೆ ಸಮರ್ಪಿಸಿದರು.

error: No Copying!