file_00000000f04081fd96ccc36bd8c6a358.png
Spread the love

ಉಡುಪಿ: ದಿನಾಂಕ:10-09-2026(ಹಾಯ್ ಉಡುಪಿ ನ್ಯೂಸ್) ಅಲೆವೂರು ನಿವಾಸಿ ಯೋರ್ವರ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅಲೆವೂರು ಶಾಖೆಯಿಂದ 4,40,000 ರೂಪಾಯಿ ಹಣವನ್ನು ಯಾರೋ ಅಪರಿಚಿತರು ಆನ್ ಲೈನ್ ಮೂಲಕ ವಂಚಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಠಲ(76) ಎಂಬವರು ಯೂನಿಯನ್‌ ಬ್ಯಾಂಕ್ ಅಫ್‌ ಇಂಡಿಯಾ ಅಲೆವೂರು ಶಾಖೆಯಲ್ಲಿ 6,00,000/- ಹಣ ಇಟ್ಟಿದ್ದು ಅದನ್ನು ಬ್ಯಾಂಕ್‌ ಅಪ್‌ ಬರೋಡಾಕ್ಕೆ ವರ್ಗಾವಣೆ ಮಾಡಲು ದಿನಾಂಕ 22/06/2026 ರಂದು ಬ್ಯಾಂಕಿಗೆ ಹೋಗಿ ಆ ಬಗ್ಗೆ ಉಪಶಾಖಾಧಿಕಾರಿಯವರಲ್ಲಿ ತಿಳಿಸಿ ಪೇಪರ್‌ಗಳಿಗೆಲ್ಲಾ ಸಹಿ ಮಾಡಿ ಬಂದಿರುತ್ತಾರೆ.

ವಿಠಲರವರು ಕಾರಣಾಂತರಗಳಿಂದ ಮಗಳ ಮನೆಯಾದ ವಿಶಾಖಪಟ್ಟಣಕ್ಕೆ ಹೋಗಿದ್ದು ದಿನಾಂಕ 08/09/2026 ರಂದು ಪುನಃ ಯೂನಿಯನ್‌ ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ಉಳಿತಾಯ ಖಾತೆಯಿಂದ ರು 4,40,000/- ವರ್ಗಾವಣೆಯಾಗಿದೆ ಎಂದು ತಿಳಿಸಿದರು. ದಿನಾಂಕ: 15/06/2026 ರಂದು ಯಾರೋ ಅಪರಿಚಿತರು ಬ್ಯಾಂಕ್‌ ಖಾತೆಯಿಂದ ವಿಠಲರವರಿಗೆ ತಿಳಿಯದೆ 4,40,000/- ಹಣವನ್ನು ಅನ್‌ಲೈನ್‌ ಮುಖಾಂತರ ತೆಗೆದು ಅನ್‌ಲೈನ್‌ನಲ್ಲಿ ಮೋಸ ಮಾಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 121/2026, ಕಲಂ: 318(4)& 66(D) IT ACT ರಂತೆ ಪ್ರಕರಣ ದಾಖಲಾಗಿದೆ.

error: No Copying!