images-1.jpeg
Spread the love

ಉಡುಪಿ: ದಿನಾಂಕ:09-09-2026 (ಹಾಯ್ ಉಡುಪಿ ನ್ಯೂಸ್) ನ್ಯಾಯಾಲಯಕ್ಕೆ ನಕಲಿ ಆಧಾರ್ ಕಾರ್ಡ್ ನೀಡಿ ವಂಚಿಸಿದ ವ್ಯಕ್ತಿ ಯೋರ್ವನ ಮೇಲೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಉಡುಪಿ ನ್ಯಾಯಾಲಯದ ಶಿರಸ್ತೆದಾರರಾಗಿರುವ ಸೋಮಪ್ಪ  ಅವರು ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಲಯದಲ್ಲಿ ಆಡಳಿತ ವಿಭಾಗದಲ್ಲಿ ಹಿರಿಯ ಶಿರಸ್ತೆದಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ದಿನಾಂಕ 31/08/2026 ರಂದು ಸಮಯ ಸುಮಾರು ಮಧ್ಯಾಹ್ನ 12:00 ಗಂಟೆಗೆ ಕೆ ಉಮ್ಮರಬ್ಬ ಮೊಯಿದ್ದಿನ್‌ ರವರು 2ನೇ ಹೆಚ್ಚುವರಿ ಹಿರಿಯ ನ್ಯಾಯಾಲಯದ ಸಿಸಿ ಸಂಖ್ಯೆ 205/2026 ರಲ್ಲಿ ಆರೋಪಿ ಸಂ: 1 ರಮಾವತ್‌ ಸ್ರೀನು ಮತ್ತು 4 ನೇ ಅರೋಪಿ ರಮಾವತ್‌ ಮೋಹನ್‌ ಕುಮಾರ್‌ರವರಿಗೆ ಜಾಮೀನು ನೀಡಲು ಬಂದಿದ್ದು ಅವರ ಜಾಮೀನು ಪೋರ್ಟ್‌ನಲ್ಲಿ ಪರಿಶೀಲಿಸಿದಾಗ ಜಾಮೀನು ಜಾಲತಾಣ ವ್ಯತ್ಯಯವಿದ್ದ ಕಾರಣ ಅಧಾರ್‌ ಪರಿಶೀಲನೆ ವೇಳೆ ಕೆ ಉಮ್ಮರಬ್ಬ ಮೊದ್ದಿನ್‌ ರವರ ಅಧಾರ್‌ನಲ್ಲಿ ಯಾವುದೇ ಕೇಸಿನಲ್ಲಿ ಜಾಮೀನು ನಿಂತದ್ದು ಗೋಚರಿಸಿರುವುದಿಲ್ಲ .ಅದರೆ ಸದ್ರಿ ಜಾಮೀನುದಾರನು ತುಂಬಾ ಸಲ ಜಾಮೀನಿಗೆ ಬಂದಿರುವುದು ಗಮನಕ್ಕೆ ಬಂದಿರುವುದರಿಂದ ಪುನಃ ಪರಿಶೀಲಿಸುವಾಗ ಅಧಾರ್‌ ನಕಲಿ ಎಂಬುದು ಶಿರಸ್ತೆದಾರರ ಗಮನಕ್ಕೆ ಬಂದಿದ್ದು ಕೂಡಲೆ ನ್ಯಾಯಾದೀಶರ ಗಮನಕ್ಕೆ ತಂದಿರುತ್ತಾರೆ. ಜಾಮೀನುದಾರರು ನ್ಯಾಯಾಲಯಕ್ಕೆ ವಂಚಿಸುವ ಉದ್ದೇಶದಿಂದ ನಕಲಿ ಆಧಾರ ಕಾರ್ಡ್‌ ತಯಾರಿಸಿ ನ್ಯಾಯಾಲಯದ ಕಾರ್ಯ ಕಲಾಪಕ್ಕೆ ದಕ್ಕೆ ತಂದಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 120/2026 ಕಲಂ: 319(2),336(3),318(4), 229(1), 340(2)BNS & ಕಲಂ: 35 The adhar Act ರಂತೆ ಪ್ರಕರಣ ದಾಖಲಾಗಿದೆ.

error: No Copying!