Spread the love

ಉಡುಪಿ: ಜೂನ್ ೭(ಹಾಯ್ ಉಡುಪಿ ನ್ಯೂಸ್) ಕಲ್ಪನಾ ಚಿತ್ರ ಮಂದಿರದಲ್ಲಿ ಬೇಕಾಬಿಟ್ಟಿ ವಾಹನಗಳ ಪಾರ್ಕಿಂಗ್ ನಿಂದಾಗಿ ದಿನನಿತ್ಯ ಟ್ರಾಫಿಕ್ ಜಾಮ್ ಸಮಸ್ಯೆ ಕಾಡುತ್ತಿದೆ.

ನಗರದ ಕಲ್ಪನಾ ಚಿತ್ರ ಮಂದಿರದಲ್ಲಿ ರಾಜ್ ಸೌಂಡ್ಸ್ ಯಾಂಡ್ ಲೈಟ್ಸ್ ತುಳು ಚಲನಚಿತ್ರ ಪ್ರದರ್ಶನವಾಗುತ್ತಿದ್ದು ಈ ಚಲನಚಿತ್ರ ವೀಕ್ಷಣೆಗೆ ಚತುಷ್ಚಕ್ರ ವಾಹನಗಳಲ್ಲಿ ಬರುವವರ ಸಂಖ್ಯೆಯೇ ಹೆಚ್ಚಾಗಿದ್ದು ಚಲನಚಿತ್ರ ಮಂದಿರದ ಹೊರಗೆ ಬೇಕಾಬಿಟ್ಟಿಯಾಗಿ ವಾಹನ ನಿಲ್ಲಿಸುವವರಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದೆಯೆಂದು ಚಲನಚಿತ್ರ ವೀಕ್ಷಕರು ದೂರಿದ್ದಾರೆ.

ಕಲ್ಪನಾ ಲಾಡ್ಜ್ ಕಟ್ಟಡದ ಒಳಗಿನ ಇಕ್ಕಟ್ಟಾದ ರಸ್ತೆಯಲ್ಲಿ ಕಾರುಗಳನ್ನು, ಗೂಡ್ಸ್ ವಾಹನಗಳನ್ನು ಪಾರ್ಕ್ ಮಾಡಿ ಹೋಗುವವರಿಂದಾಗಿ ಇಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ ಎನ್ನಲಾಗಿದೆ. ಟ್ರಾಫಿಕ್ ನಿರ್ವಹಿಸಲು ಯಾವುದೇ ಸಿಬ್ಬಂದಿ ಯನ್ನು ಇಲ್ಲಿ ನೇಮಿಸದೆ ಇರುವುದು ಕೂಡ ಸಮಸ್ಯೆಗೆ ಕಾರಣವೆನ್ನಲಾಗಿದೆ. ಉಡಾಫೆಯ ವರ್ತನೆಯ ಕೆಲವರು ಚಲನಚಿತ್ರ ಮಂದಿರದ ಪಾರ್ಕಿಂಗ್ ನಲ್ಲಿ ವಾಹನ ನಿಲ್ಲಿಸದೆ ಚಲನಚಿತ್ರ ಮಂದಿರದ ಮುಂಭಾಗ ಬೇಕಾಬಿಟ್ಟಿ ವಾಹನ ನಿಲ್ಲಿಸಿ ಸಮಸ್ಯೆ ಉಂಟು ಮಾಡುತ್ತಿದ್ದಾರೆ.

ಚಲನಚಿತ್ರ ಮಂದಿರದ ಸಂಬಂಧಿತರು ಕಲ್ಪನಾ ಲಾಡ್ಜ್ ನ ಕಟ್ಟಡದ ಒಳಗಿನ ರಸ್ತೆಯಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡದಂತೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಚಲನಚಿತ್ರ ವೀಕ್ಷಕರು ಆಗ್ರಹಿಸಿದ್ದಾರೆ.

error: No Copying!