IMG-20260830-WA0079.jpg
Spread the love

ದಿನಾಂಕ:30-08-2026 (ಹಾಯ್ ಉಡುಪಿ ನ್ಯೂಸ್)

ಉಡುಪಿ: ನಗರಸಭಾ ವ್ಯಾಪ್ತಿಯ ಮಣಿಪಾಲದಲ್ಲಿ ಬೀದಿನಾಯಿಯೊಂದು ಮನೆ ಮನೆಯಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರಿಗೆ  ದಾಳಿ ಮಾಡಿದ್ದು ಗಾಯಗೊಂಡ ನೊಂದ ಅಸಹಾಯಕ ಮಹಿಳೆಗೆ ತುರ್ತು ನೆರವು ರೂ.15000/- ವಿಶು ಶೆಟ್ಟಿ ಅಂಬಲಪಾಡಿ ವ್ಯವಸ್ಥೆಗೊಳಿಸಿ ಧೈರ್ಯ ತುಂಬಿದ ಘಟನೆ ನಡೆದಿದೆ.

ಒಂಟಿ ಮಹಿಳೆ ಹೊರಜಿಲ್ಲೆಯವರಾಗಿದ್ದು ಬಾಡಿಗೆ ಮನೆಯಲ್ಲಿ ವಾಸ ಮಾಡಿ ಬೇರೆಯವರ ಮನೆಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು ನಾಯಿ ದಾಳಿಯಿಂದಾಗಿ ಕನಿಷ್ಠ 2 ತಿಂಗಳು ಮಹಿಳೆಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ವೈದ್ಯರು ಸಲಹೆ ನೀಡಿದ್ದು ಜೀವನ ಸಾಗಿಸಲು ನೊಂದ ಮಹಿಳೆ ಸಂಬಂಧ ಪಟ್ಟವರಲ್ಲಿ ನೆರವು ಕೇಳಿದ್ದು ಸ್ಪಂದನೆ ಸಿಗದೇ ಮಹಿಳೆ ವಿಶು ಶೆಟ್ಟಿಯವರಲ್ಲಿ ಸಹಾಯ ಕೇಳಿದ್ದು ವಿಶು ಶೆಟ್ಟಿ ಸ್ಪಂದಿಸಿ ಜಿಲ್ಲಾಸ್ಪತ್ರೆಗೆ ಕರೆತಂದು ಔಷದೋಪಚಾರ ಮಾಡಿದ್ದಾರೆ.

ಮಹಿಳೆಗೆ ಕಾಲಿಗೆ ಆದ ಭೀಕರ ಗಾಯ ಬೇಗ ಗುಣಮುಖ ವಾಗುವುದಿಲ್ಲ. ಕನಿಷ್ಠ 2 ತಿಂಗಳು ಬೇಕಾಗುತ್ತದೆ. ಜೊತೆಗೆ ತಿರುಗಾಡದೆ ಮಲಗಿ ವಿಶ್ರಾಂತಿ ಪಡೆಯಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಬೀದಿ ನಾಯಿ ಕಡಿತದ ಬಗ್ಗೆ ಇಲಾಖೆ ಈವರೆಗೆ ಸರಿಯಾದ ನಿರ್ಧಾರ ಕೈಗೊಂಡಿಲ್ಲ. ಮಕ್ಕಳು ಹಾಗೂ ವೃದ್ಧರು ಬೀದಿ ನಾಯಿಗೆ ಹೆದರಿ ತಿರುಗಾಡಲು ಕಷ್ಟವಾಗುತ್ತದೆ. ತುರ್ತು ಕ್ರಮ ಅಗತ್ಯ ಎಂದು
ವಿಶು ಶೆಟ್ಟಿ ಅಂಬಲಪಾಡಿ ಹೇಳಿದ್ದಾರೆ.

error: No Copying!