ಉಡುಪಿ: ದಿನಾಂಕ:30-08-2026(ಹಾಯ್ ಉಡುಪಿ ನ್ಯೂಸ್) ನಗರದ ಡಯಾನಾ ಸರ್ಕಲ್ ಬಳಿಯ ಕಲ್ಯಾಣ ಜ್ಯುವೆಲ್ಲರಿ ಬಳಿ ಸಿಗ್ನಲ್ ಅಳವಡಿಕೆಗಾಗಿ ತಂದಿರಿಸಲಾಗಿದ್ದ ಸಾಮಾಗ್ರಿಗಳು ಕಳ್ಳತನ ವಾಗಿವೆ ಎಂದು ಹೈದರಾಬಾದ್ ನ ಕಂಪೆನಿಯ ಶ್ರೀನಿವಾಸ ಏಲೂರಿ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಶ್ರೀನಿವಾಸ ಏಲೂರಿ ಎಂಬವರು AVP ಆಪರೇಷನ್ಸ್ ACS ಟೆಕ್ನಾಲಜಿ ಲಿಮಿಡೆಟ್ ಲೆವೆಲ್ -7 ಪಾರ್ಧ ಪಿಕಾಸೋ ಬಿಲ್ಡಿಂಗ್ ದುರ್ಗಂ ಕೆರೆ ರಸ್ತೆ ಮಾದಾಪುರ ಹೈದರಾಬಾದ್ ಸಂಸ್ಥೆಯು ಉಡುಪಿಯ ಕಲ್ಯಾಣ ಜ್ಯುವೆಲ್ಲರಿ ಜಂಕ್ಷನ್ ಬಳಿ ಟ್ರಾಫಿಕ್ ಸಿಗ್ನಲ್ ನ ಅಳವಡಿಕೆಯ ಬಗ್ಗೆ ದಿನಾಂಕ 18/07/2023 ರಂದು ಬಿಡಿಭಾಗಗಳನ್ನು ತಂದು ಇರಿಸಿದ್ದು ,ಸದ್ರಿ ಪ್ರಾಜೆಕ್ಟ್ ನಲ್ಲಿ ವಿಳಂಬ ಆದ ಕಾರಣ ಉಡುಪಿ ನಗರ ಸಭೆಯ ಅಧಿಕಾರಿಯವರು ಆಕ್ಷೇಪಣೆ ಮಾಡಿದ ಕಾರಣ ಅದರ ಬಿಡಿ ಭಾಗಗಳನ್ನು ಸ್ಥಳದಲ್ಲಿಯೆ ಇರಿಸಿ ಹೋಗಿದ್ದು ದಿನಾಂಕ 22/08/2026 ರಂದು ಬಂದು ನೋಡಿದಾಗ ಸದ್ರಿ ಸೊತ್ತುಗಳು ಕಳವಾಗಿದ್ದು.ಕಳವಾದ ಸೊತ್ತುಗಳ ಮಾಲ್ಯ 8 ಲಕ್ಷ ರೂಪಾಯಿ ಆಗಿರುತ್ತದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ:117/2026, ಕಲಂ: 303(2) BNS ರಂತೆ ಪ್ರಕರಣ ದಾಖಲಾಗಿದೆ.
