IMG-20260829-WA0070.jpg
Spread the love

ಬ್ರಹ್ಮಾವರ: ದಿನಾಂಕ: 29-08-2026(ಹಾಯ್ ಉಡುಪಿ ನ್ಯೂಸ್) ಫೇಸ್ ಬುಕ್ ನಲ್ಲಿ ವಿದೇಶದಲ್ಲಿ ಉದ್ಯೋಗ ದೊರಕಿಸಿ ಕೊಡುವ ವೀಸಾ ಜಾಹೀರಾತು ನಂಬಿದ ವ್ಯಕ್ತಿ ಯೋರ್ವರಿಗೆ ಅಪರಿಚಿತರು 1.50ಲಕ್ಷ ರೂಪಾಯಿ ವಂಚನೆ ನಡೆಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬ್ರಹ್ಮಾವರ ನಿವಾಸಿ ದಿನೇಶ್‌ ಎಂಬವರು ವಿದೇಶದಲ್ಲಿ ಕೆಲಸ ಮಾಡುವ ಇಚ್ಚೆಯಿಂದ facebook ಖಾತೆಯಲ್ಲಿದ್ದ Website ನಲ್ಲಿ Visa ಬಗ್ಗೆ ಅರ್ಜಿ ಹಾಕಿದ್ದು, ಈ ಬಗ್ಗೆ ದಿನಾಂಕ 20/06/2026 ರಂದು ದಿನೇಶ್ ರವರಿಗೆ ಕರೆ ಮಾಡಿದ ಆರೋಪಿಗಳು ಚೆನೈಯಿಂದ ವಿಷ್ಣುಮಣಿ ಮತ್ತು ಶ್ರೀನಿವಾಸನ್‌ ಎಂಬ ಹೆಸರಿನಲ್ಲಿ ಮಾತನಾಡಿ Visa ಕೊಡಿಸುವುದಾಗಿ ನಂಬಿಸಿ, ರೂಪಾಯಿ 1,50,000/- ಖರ್ಚಾಗುವುದಾಗಿ ತಿಳಿಸಿದ್ದು, ಅವರ ಮಾತನ್ನು ನಂಬಿ ದಿನೇಶ್ ರವರು ದಿನಾಂಕ 02/07/2026 ರಂದು ಮಗಳ ಖಾತೆಯಿಂದ ಆರೋಪಿಯು ನೀಡಿದ್ದ ವೃಷ್ಣಕುಪ್ಪ ಆರ್ಥಿ ಹೆಸರಿನಲ್ಲಿರುವ ಬ್ಯಾಂಕ್‌ ಖಾತೆಗೆ 75,000/- ಹಣ ಗೂಗಲ್‌ ಪೇ ಮೂಲಕ ಹಾಗೂ ಅಳಿಯ ನ ಖಾತೆಯಿಂದ ಅಜಿತ್‌ ಕುಮಾರ್‌ ಹೆಸರಿನಲ್ಲಿರುವ ಬ್ಯಾಂಕ್‌ ಖಾತೆಗೆ 75,000/- ಹಣವನ್ನು Online ವರ್ಗಾವಣೆ ಮಾಡಿಸಿದ್ದು, ಹಣವನ್ನು ಪಡೆದ ನಂತರ ಆರೋಪಿಗಳು ದಿನೇಶ್ ರವರಿಗೆ Visa ವನ್ನು ಕೊಡಿಸದೇ, ಸಂಪರ್ಕಕ್ಕೂ ಸಿಗದೆ ವಂಚಿಸಿದ್ದಾರೆ .

ದಿನೇಶ್ ರವರಿಗೆ Visa ಕೊಡಿಸುವುದಾಗಿ ನಂಬಿಸಿ 1,50,000/- ಹಣವನ್ನು Online ಮೂಲಕ ವರ್ಗಾಯಿಸಿಕೊಂಡು ವಂಚಿಸಿರುವುದಾಗಿ ದಿನೇಶ್ ರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 166/2026 ಕಲಂ: 66(C), 66(D) IT Act ರಂತೆ ಪ್ರಕರಣ ದಾಖಲಾಗಿದೆ.

error: No Copying!