ಅಮಾಸೆಬೈಲು: ದಿನಾಂಕ:25-08-2026(ಹಾಯ್ ಉಡುಪಿ ನ್ಯೂಸ್) ಶ್ರೀಯೋಗರೂಢ ನರಸಿಂಹ ದೇವಸ್ಥಾನ ನರಸೀಪುರ ದೇವಸ್ಥಾನದ ಭೋಜನ ಶಾಲೆಯ ಬೀಗ ಒಡೆದು ಅಕ್ರಮವಾಗಿ ಒಳ ಪ್ರವೇಶಿಸಿದ ಕೆಲವು ವ್ಯಕ್ತಿಗಳು ಬಲಾತ್ಕಾರವಾಗಿ ವಶಪಡಿಸಿಕೊಳ್ಳುವ ಹುನ್ನಾರ ನಡೆಸಿರುವ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಂಕರನಾರಾಯಣ ಕೊಡ್ಗಿ ಎಂಬವರು ಶ್ರೀ ಯೋಗರೂಢ ನರಸಿಂಹ ದೇವಸ್ಥಾನ ನರಸೀಪುರ ಇಲ್ಲಿನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಗಿದ್ದು ,ದಿನಾಂಕ: 23-08-2026 ರಂದು 14:50 ಗಂಟೆಯಿಂದ 18:00 ಗಂಟೆಯ ಮದ್ಯಾವಧಿಯಲ್ಲಿನ ಸಮಯ ಕುಂದಾಪುರ ತಾಲೂಕು ರಟ್ಟಾಡಿ ಗ್ರಾಮ ನರಸೀಪುರ ಶ್ರೀ ಯೋಗರೂಢ ನರಸಿಂಹ ದೇವಸ್ಥಾನ ಎದುರಿನಲ್ಲಿ ಇರುವ ದೇವಳದ ಭೋಜನ ಶಾಲೆಗೆ ಈ ಹಿಂದ ಇದ್ದ ನಾಮಫಲಕವನ್ನು ತೆಗೆದು ಸಮುದಾಯ ಏನ್ನುವ ಪದ ಸೇರಿಸಿ ಶ್ರೀ ಯೋಗರೂಢ ನರಸಿಂಹ ದೇವಸ್ಥಾನ ಸಮುದಾಯ ಭವನ ಎಂಬ ಹೊಸ ನಾಮ ಫಲಕವನ್ನು ಅಪಾದಿತರು 1. ಜಯಂತ್ ಅಚಾರಿ 2.ರಕ್ಷಿತ ಅಚಾರಿ 3.ರಚಿತ್ ಅಚಾರಿ 4.ರಾಜೇಶ್ ಅಚಾರಿ 5.ರಮೇಶ್ ಮಡಿವಾಳ ಮತ್ತು ಇತರರು ಗುಂಪು ಕಟ್ಟಿಕೊಂಡು ಬಂದು ಭೋಜನ ಶಾಲೆಯ ಬೀಗ ಒಡೆದು ಅನಧಿಕೃತವಾಗಿ ಸಿಸಿಟಿವಿ ಹಾಕಿ ಹೊಸ ನಾಮ ಫಲಕ ಅಳವಡಿಸಿ ಭೋಜನ ಶಾಲೆಯನ್ನು ಬಲತ್ಕಾರವಾಗಿ ವಶಪಡಿಸಿಕೊಳ್ಳುವ ಹುನ್ನಾರ ನಡೆಸಿದ್ದು ವ್ಯವಸ್ಥಾಪನ ಸಮಿತಿಯ ಸುಪರ್ದಿಯಲ್ಲಿರುವ ಭೋಜನ ಶಾಲೆಯ ಭೀಗ ಒಡೆದಿದ್ದಾರೆ ಎಂದು ಶಂಕರನಾರಾಯಣ ಕೊಡ್ಗಿ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಕಲಂ: 324(4), 329(3) ಜೊತೆಗೆ 190 BNS ರಂತೆ ಪ್ರಕರಣ ದಾಖಲಾಗಿದೆ.
