IMG-20260825-WA0119.jpg
Spread the love

ಮಲ್ಪೆ:   ದಿನಾಂಕ:25-08-2026 (ಹಾಯ್ ಉಡುಪಿ ನ್ಯೂಸ್) ಆಳ ಸಮುದ್ರ ಬೋಟ್ ಒಂದರ ಕೆಲಸಗಾರರು ಈರ್ವರು ಮದ್ಯಪಾನ ಮಾಡಿ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಗಲಾಟೆ ಮಾಡಿ ಕೊಂಡು ಓರ್ವ ಮೀನುಗಾರನು ಇನ್ನೋರ್ವ ನನ್ನು ಕೊಲೆ ಮಾಡಿರುವ ಘಟನೆ ಮಲ್ಪೆ ಧಕ್ಕೆಯಲ್ಲಿ ನಡೆದಿದೆ.

ಉಡುಪಿ ತಾಲೂಕು, ಕಿದಿಯೂರು ಗ್ರಾಮದ ನಿವಾಸಿ ವಾಸ್ಮತೀಶ ಕಾಂಚನ್‌ (54) ಎಂಬವರು “ರಾಮಮಿತ್ರ” ಎಂಬ ಆಳ ಸಮುದ್ರ ಬೋಟ್‌ ಮಾಲೀಕರಾಗಿರುತ್ತಾರೆ. ಅಗಸ್ಟ್‌ ಮೊದಲ ವಾರದಲ್ಲಿ ಮೀನುಗಾರಿಕೆಯ ಬಗ್ಗೆ ಸಮುದ್ರಕ್ಕೆ ಹೋಗಿ ದಿನಾಂಕ:23.08.2026 ರಂದು ಮಲ್ಪೆ ಬಂದರಿಗೆ ವಾಪಸ್ಸು ಬಂದು ದಿನಾಂಕ: 24.08.2026 ರಂದು ಮೀನು ಖಾಲಿ ಮಾಡಿಕೊಂಡು ಬಾಬುತೋಟ ಧಕ್ಕೆಯ ಬಳಿ ಬೋಟನ್ನು ಕಟ್ಟಿರುತ್ತಾರೆ. ಮೋಹನ್‌ ಜಿನಾ, ದುಲಾಮನಿ, ಅಭಿಷೇಕ್‌ ಹಾಗೂ ಗೋವಿಂದ ಬೋಟ್‌ ನಲ್ಲಿ ಇದ್ದು, ಉಳಿದವರು ಊರಿಗೆ ಹೋಗಿರುತ್ತಾರೆ.

ದಿನಾಂಕ 25-08-2026 ರಂದು ಬೆಳಿಗ್ಗೆ ಸುಮಾರು 5:30 ಗಂಟೆಗೆ ಬೋಟ್‌ನ ತಾಂಡೇಲ ಸುಬ್ರಾಯರವರು ವಾಸ್ಮತೀಶ ಕಾಂಚನ್ ರಿಗೆ ಕರೆ ಮಾಡಿ ಅಭಿಷೇಕ್‌ ಮತ್ತು ಗೋವಿಂದ ಬೋಟಿನಲ್ಲಿ ಗಲಾಟೆ ಮಾಡಿಕೊಂಡು ಗೋವಿಂದನು ಅಭಿಷೇಕ್‌ನ ಎದೆಗೆ ಚೂರಿ ಇರಿದು ಕೊಲೆ ಮಾಡಿ ಓಡಿ ಹೋಗಿರುವುದಾಗಿ ತಿಳಿಸಿದ್ದು, ವಾಸ್ಮತೀಶ ಕಾಂಚನ್ ರು ಕೂಡಲೇ  ಬೋಟಿಗೆ ಬಂದಿದ್ದು, ಅಭಿಷೇಕ್‌ನು ರಕ್ತದ ಮಡುವಿನಲ್ಲಿ ಬಿದ್ದುಕೊಂಡು ಹೊರಳಾಡುತ್ತಿದ್ದು, ಆತನನ್ನು ವಿಚಾರಿಸಿದಾಗ ಗೋವಿಂದನು ಬಂದು ತನಗೆ ಚೂರಿಯಿಂದ ಇರಿದು ಓಡಿ ಹೋಗಿರುವುದಾಗಿ ತಿಳಿಸಿರುತ್ತಾನೆ. ಸ್ವಲ್ಪ ಹೊತ್ತಿನಲ್ಲಿಯೇ ಅಭಿಷೇಕ್‌ನು ಮೃತಪಟ್ಟಿರುವುದಾಗಿದೆ.

ಗೋವಿಂದ ಹಾಗೂ ಅಭಿಷೇಕ್‌ ರವರು ಮಧ್ಯಪಾನ ಮಾಡಿ ಯಾವುದೋ ವಿಚಾರದಲ್ಲಿ ಜಗಳ ಮಾಡಿಕೊಂಡಿದ್ದು, ಅದೇ ದ್ವೇಷದಿಂದ ಗೋವಿಂದನು ಈ ದಿನ ದಿನಾಂಕ:25.08.2026ರಂದು ಬೆಳಿಗ್ಗೆ ಸುಮಾರು 4:30 ಗಂಟೆಗೆ  ಯಾವುದೋ ಆಯುಧದಿಂದ ಅಭಿಷೇಕ್‌ನ  ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.  

ಈ ಬಗ್ಗೆ ಮಲ್ಪೆ  ಪೊಲೀಸ್‌ ಠಾಣೆಯಲ್ಲಿ ಕಲಂ:103 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!