ಉಡುಪಿ: ದಿನಾಂಕ:23-08-2026(ಹಾಯ್ ಉಡುಪಿ ನ್ಯೂಸ್) ಫೇಸ್ಬುಕ್ ನಲ್ಲಿ ಕೇರಳ ಲಾಟರಿ ಜಾಹೀರಾತು ನೋಡಿ ಲಾಟರಿ ಖರೀದಿ ಮಾಡಿದ ವ್ಯಕ್ತಿ ಯೋರ್ವರಿಗೆ ಅಪರಿಚಿತರು 27ಲಕ್ಷ ರೂಪಾಯಿ ವಂಚನೆ ನಡೆಸಿರುವ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಉಡುಪಿ ನಿವಾಸಿ ಜುಲಿಯಾನ ಎಂಬವರು ಫೇಸ್‌ಬುಕ್ ನಲ್ಲಿ Kerala Mega Jackpot’s ಎಂಬ ಒನ್ ಲೈನ್ ಲಾಟರಿಯ ಜಾಹೀರಾತನ್ನು ನೋಡಿದ್ದು, ಲಾಟರಿ ಟಿಕೇಟ್ ಖರೀದಿ ಮಾಡಲು ಅದರಲಿದ್ದ ಲಿಂಕ್‌ನ್ನು ಕ್ಲಿಕ್ ಮಾಡಿ ಲಾಟರಿ ಟಿಕೇಟ್ ಖರೀದಿ ಮಾಡಿರುತ್ತಾರೆ. ನಂತರ ಯಾರೋ ಅಪರಿಚಿತರು ಜುಲಿಯಾನರಿಗೆ ಲಾಟರಿ ಬಹುಮಾನ ಬಂದಿರುವುದಾಗಿ ನಂಬಿಸಿ ಬಹುಮಾನ ಪಡೆಯಬೇಕಾದಲ್ಲಿ ಪ್ರೊಸೆಸಿಂಗ್ ಚಾರ್ಜ್, ಶಿಪ್ಪಿಂಗ್ ಚಾರ್ಜ್, ಫೊರೆಕ್ಸ್ ಚಾರ್ಜ್, ಹ್ಯಾಂಡಲಿಂಗ್ ಪೀಜ್ ಕಟ್ಟುವಂತೆ ತಿಳಿಸಿದ್ದು, ಅದರಂತೆ ಜುಲಿಯಾನರು ಅಪರಿಚಿತರು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ದಿನಾಂಕ 24/04/2026 ರಿಂದ ದಿನಾಂಕ 31/07/2026 ರವರೆಗೆ ಒಟ್ಟು ರೂಪಾಯಿ 27,06,862/- ಹಣವನ್ನು ವರ್ಗಾಯಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಲಂ:66(D) ಐ.ಟಿ. ಆಕ್ಟ್, ಕಲಂ: 316(2), 318(4) BNS ರಂತೆ ಪ್ರಕರಣ ದಾಖಲಾಗಿದೆ.
