images-6.jpeg
Spread the love

ಹೆಬ್ರಿ: ದಿನಾಂಕ:23-08-2026(ಹಾಯ್ ಉಡುಪಿ ನ್ಯೂಸ್) ಮುತ್ತೂಟ್ ಫೈನಾನ್ಸ್ ನೌಕರನೊಬ್ಬ ಸಾಲ ತೆಗೆಸಿ ಕೊಡುವುದಾಗಿ ನಂಬಿಸಿ ಚಿನ್ನ ಪಡೆದು ಇದೀಗ ಚಿನ್ನ ವನ್ನು ವಾಪಸ್ ಕೊಡದೆ ವಂಚನೆ ನಡೆಸಿರುವ ಬಗ್ಗೆ ನೊಂದ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಹೆಬ್ರಿ ಗ್ರಾಮದ ನಿವಾಸಿ ಶೃತಿ (32) ಎಂಬವರು  ದಿನಾಂಕ 23/02/2025 ರಂದು ತಾಯಿಗೆ ಆರೋಗ್ಯ ಸರಿಯಿಲ್ಲದ ಕಾರಣ ತುರ್ತು ಚಿಕಿತ್ಸೆಗಾಗಿ ಹಣದ ಅಗತ್ಯವಿದ್ದುದರಿಂದ ಹೆಬ್ರಿ ಮುತ್ತ್ತೂಟ್‌ ಪೈನಾನ್ಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಪರಿಚಯದ ಮಂಜುನಾಥ ಎಂಬವನಲ್ಲಿ ತಿಳಿಸಿದಾಗ ಅವನು ನಿಮ್ಮಲ್ಲಿ ಚಿನ್ನ ಇದ್ದರೆ ಕೊಡಿ ತಾನು ಪೈನಾನ್ಸ್‌ನಲ್ಲಿ ಇಟ್ಟು ಹಣ ಕೊಡುವುದಾಗಿ ನಂಬಿಸಿ ಅದರಂತೆ ಶ್ರುತಿ ರವರು 3 ಪವನ್‌ ತೂಕದ ಕನಕ ಮಾಲೆ ಸರ -1 ಹಾಗೂ ತಲಾ 4 ಗ್ರಾಮ ತೂಕದ ಕಿವಿಯೋಲೆ ಒಂದು ಜೊತೆ 1.5 ಗ್ರಾಂ ತೂಕದ ಲೇಡಿಸ್‌ ಉಂಗುರ -1, 4 ಪವನ್‌ ತೂಕದ ಹವಳದ ಸರ -1 ನ್ನು ಕೊಟ್ಟು ಹಣ ಕೊಡುವಂತೆ ಕೇಳಿದ್ದು, ಮಂಜುನಾಥನು 70,000/- ರೂಪಾಯಿ ಹಣವನ್ನು ಶ್ರುತಿ ರವರ ಬ್ಯಾಂಕ್‌ ಖಾತೆಗೆ ಹಾಕಿದ್ದು ಉಳಿದ ಹಣವನ್ನು ಖಾತೆಗೆ ಹಾಕುವುದಾಗಿ ನಂಬಿಸಿ ಅಲ್ಲದೆ ಚಿನ್ನವನ್ನು ಬಿಡಿಸಿ ಕೊಡುವುದಾಗಿ 70,000/- ಹಣವನ್ನು ಗೂಗಲ್‌ ಪೇ ಮುಖಾಂತರ ಹಾಕಿಸಿಕೊಂಡಿದ್ದು ಇದುವರೆಗೂ ಹಣವನ್ನು ಕೊಡದೆ ಅಥವಾ ಚಿನ್ನವನ್ನು ಬಿಡಿಸಿ ಕೊಡದೆ ನಂಬಿಕೆ ದ್ರೋಹ ಎಸಗಿ ಮೋಸ ಮಾಡಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ  ಕಲಂ: 316(2) 318(2) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!