ಉಡುಪಿ: ದಿನಾಂಕ :22-08-2026(ಹಾಯ್ ಉಡುಪಿ ನ್ಯೂಸ್) ಅಲೆವೂರಿನ ಬಾಳೆ ಹಣ್ಣು ಗೋದಾಮಿನಲ್ಲಿ ಕ್ರಿಮಿನಾಶಕ ರಾಸಾಯನಿಕ ಬಳಸಿ ಬಾಳೆಕಾಯಿಗಳನ್ನು ಹಣ್ಣು ಮಾಡುತ್ತಿದ್ದ ಆರೋಪಿಯನ್ನು ಉಡುಪಿ ಆಹಾರ ಸುರಕ್ಷತಾ ಅಧಿಕಾರಿ ವಿವೇಕ್ ತ್ರಿಮಲ್ಲೆ ಅವರ ದೂರಿನ ಮೇರೆಗೆ ನಗರ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಅಹಾರ ಸುರಕ್ಷತಾ ಆಧಿಕಾರಿಯವರಾದ ವಿವೇಕ್ ತ್ರಿಮಲ್ಲೆ ಅವರು ದಿನಾಂಕ 20/08/2026 ರಂದು ಉಡುಪಿಯ ಕೆಮ್ತೂರು ವಿಷ್ಣುಮೂರ್ತಿ ದೇವಸ್ಥಾನದ ಹತ್ತಿರ ಗೋದಾಮಿನಲ್ಲಿ ಬಾಳೆಕಾಯಿ ಗೊನೆಯನ್ನು ರಾಸಾಯನಿಕ ಪದಾರ್ಥ ಬಳಸಿ ಹಣ್ಣು ಮಾಡುತ್ತಿರುವ ಬಗ್ಗೆ ಅಂಕಿತ ಅಧಿಕಾರಿಯವರಾದ ಉಪವಿಭಾಗೀಯ ಅಧಿಕಾರಿಯವರಾದ ಶ್ರೀಮತಿ ರಶ್ಮಿ ರವರಿಗೆ ಖಚಿತ ಮಾಹಿತಿ ಬಂದಂತೆ ಮಾಹಿತಿ ಬಂದ ಸ್ಥಳಕ್ಕೆ ಉಪವಿಭಾಗೀಯ ದಂಡಾಧಿಕಾರಿ ಹಾಗೂ ಉಡುಪಿ ತಹಶೀಲ್ದಾರರವರ ಉಪಸ್ಥಿತಿಯಲ್ಲಿ ವಿವೇಕ್ ತ್ರಿಮಲ್ಲೆ ರವರ ನೇತೃತ್ವದಲ್ಲಿ ಸಿಬ್ಬಂದಿಯವರೊಂದಿಗೆ ಬೆಳಿಗ್ಗೆ 7:00 ಗಂಟೆಗೆ ಕೆಮ್ತೂರು ಕೊರಂಗ್ರಪಾಡಿ ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನದ ಹತ್ತಿರ ದಾಳಿ ನಡೆಸಿದಾಗ ಸ್ಥಳದಲ್ಲಿ ತಿಮ್ಮರೆಡ್ಡಿ (53) ತಂದೆ: ಶಿವಣ್ಣ ವಾಸ: ವಿಷ್ಣಮೂರ್ತಿ ದೇವಸ್ಥಾನದ ಹತ್ತಿರ ಕೆಮ್ತೂರು ಕೊರಂಗ್ರಪಾಡಿ ಗ್ರಾಮ ಎಂಬವನು ಗೋಧಾಮಿನಲ್ಲಿ ಆಹಾರ ಪದಾರ್ಥವಾದ ಬಾಳೆಗೊನೆಗಳಿಗೆ ಅಪಾಯಕಾರಿಯಾದ Indothrel ಎಂಬ ಕ್ರಿಮಿನಾಶಕ ರಾಸಾಯನಿಕ ಪದಾರ್ಥ ಬಳಸಿ ಹಣ್ಣು ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಸುಮಾರು ರೂ ಪಾಯಿ 160000/- ಮೌಲ್ಯದ 2000 ಕೆಜಿ ಕಾಯಿ ಬಾಳೆ ಗೊನೆಗಳನ್ನು ಗೋದಾಮಿನಲ್ಲಿ ದಾಸ್ತಾನು ಮಾಡಿರುವುದು ಹಾಗೂ ಅಹಾರ ಪದಾರ್ಥವನ್ನು ಸಾಗಾಣಿಕೆ ಮಾಡುತ್ತಿರುವ KA-20-AC8080, KA-20-AB-847̧0 ಹಾಗೂ KA-20-AC-9657 ಗೂಡ್ಸ್ ಟೆಂಪೋ ವಾಹನಗಳಲ್ಲಿ ಅಹಾರ ಸುರಕ್ಷತಾ ಪ್ರಮಾಣ ಪತ್ರ ಇಲ್ಲದೆ ಬಾಳೆಗೊನೆಗಳನ್ನು ಸರಬರಾಜು ಮಾಡುತ್ತಿರುವುದು ಕಂಡು ಬಂದಿದ್ದು ಇದನ್ನು ಸೇವನೆ ಮಾಡಿದರೆ ಸಾರ್ವಜನಿಕರ ಆರೋಗ್ಯಕ್ಕೆ ಹಾನಿಕಾರಕವಾಗಿರುವುದಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 274 BNS ರಂತೆ ಪ್ರಕರಣ ದಾಖಲಾಗಿದೆ.
