ಉಡುಪಿ : ಬಿಜೆಪಿ ಆಡಳಿತದಲ್ಲಿ ಅಕ್ರಮ ಕಟ್ಟಡಗಳಿಗೆ ಅನುಮತಿ ; ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಟ್ಟಡದಲ್ಲಿ ಲಾಡ್ಜಿಂಗ್ ಮತ್ತು ಹೋಟೆಲಿಗೆ ಅವಕಾಶ ನೀಡಿದ್ದು ಎಷ್ಟು ಸರಿ : ಸುರೇಶ್ ಶೆಟ್ಟಿ ಬನ್ನಂಜೆ …
ಉಡುಪಿ: ಬಿಜೆಪಿಯ ನಾಯಕರುಗಳು ವಿಧಾನಸಭೆಯಲ್ಲಿ ಸಚಿವರಾದ ನಾಗೇಂದ್ರ ಅವರ ಬಗ್ಗೆ ರಾಜೀನಾಮೆ ಕೊಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ ಅವರದೇ ಪಕ್ಷ ಕಳೆದ ಐದು ವರ್ಷಗಳಿಂದ ಆಡಳಿತದಲ್ಲಿ ಇದ್ದ ಉಡುಪಿ ನಗರದಲ್ಲಿ ನಗರ ಸಭಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಅನಧಿಕೃತ ಅವೈಜ್ಞಾನಿಕ ಕಟ್ಟಡಗಳಿಗೆ ಲೈಸೆನ್ಸ್ ಅನ್ನು ನೀಡಲು ಕಾರಣ ಏನು?
ಇದೇ ನಮ್ಮ ಉಡುಪಿಯ ಸಂಸದರು,ಶಾಸಕರು,ಹಾಗೂ ಉಡುಪಿ ನಗರಸಭೆಯ ಆಡಳಿತ ಅಂದರೆ ಬಿಜೆಪಿಯ ಅಧ್ಯಕ್ಷರು ಹಾಗೂ ನಗರಸಭಾ ಸದಸ್ಯರುಗಳಿಗೆ ನಿಯಮಗಳನ್ನು ಗಾಳಿಗೆ ತೂರಿರುವ ಕಟ್ಟಡಗಳು ಕಣ್ಣಿಗೆ ಕಾಣುವುದಿಲ್ಲ ವೆ? ಉಡುಪಿಯ ಬನ್ನಂಜೆ. ಶಿರಬೀಡು ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದ 5 ಅಂತಸ್ತಿನ ಲಾಡ್ಜಿಂಗ್ ಪಾರ್ಟಿ ಹಾಲ್ ಮತ್ತು ಹೋಟೆಲ್ ರೆಸ್ಟೋರೆಂಟ್ (Ayyukt viuw.) ಉದ್ಘಾಟನೆ ಆಗಲು ಸಜ್ಜಾಗಿದೆ.
ಈ ಕಟ್ಟಡ ಕಾಮಗಾರಿ ನಡೆಯುತ್ತಿರುವಾಗ ನಗರಸಭೆಯ ಅಧಿವೇಶನದಲ್ಲಿ ಈ ಬಗ್ಗೆ ನಾನು ಪ್ರಶ್ನಿಸಿದ್ದು ಅದಕ್ಕೆ ಲಿಖಿತ ಹೇಳಿಕೆ ನೀಡಿ ಎಂದು ಹೇಳಿದ ಆಗಿನ ನಗರಸಭಾ ಅಧ್ಯಕ್ಷರು
ಮತ್ತು ಶಾಸಕರು , ನಾನು ನಗರಸಭಾ ಅಧ್ಯಕ್ಷರಿಗೆ ಲಿಖಿತ ಹೇಳಿಕೆಯನ್ನು ನೀಡಿ ಅದರ ಪ್ರತಿಯೊಂದನ್ನು ಪಡಕೊಂಡಿದ್ದರೂ ನನಗೆ ಯಾವುದೇ ಉತ್ತರವನ್ನು ನೀಡದೆ ಇದೀಗ ಅಲ್ಲಿ ಹೋಟೆಲ್ ಉದ್ಘಾಟನೆಗೆ ರೆಡಿಯಾಗಿದೆ. ಸ್ಥಳೀಯವಾಗಿ ಪಾರ್ಕಿಂಗ್ ಸಮಸ್ಯೆ ತುಂಬಾ ಇರುವುದರಿಂದ.ಈ ಬಗ್ಗೆ ನಾನು ನಗರಸಭೆ ಅಧಿವೇಶನದಲ್ಲಿ ಎಚ್ಚರಿಸಿದ್ದು. ಇದನ್ನು ಗಣನೆಗೆ ತೆಗೆದುಕೊಳ್ಳದೆ ಜನ ವಿರೋಧಿಗಳಾಗಿ ಪರವಾನಿಗೆ ನೀಡಿರುತ್ತಾರೆ.
ಉಡುಪಿ ಬಿಜೆಪಿಯ ಸಂಸದರು, ಸ್ಥಳೀಯ ಶಾಸಕರು, ಉಡುಪಿಯ ನಗರಸಭೆ ಆಡಳಿತ ಬಿಜೆಪಿಯ ವೈಫಲ್ಯವಾಗಿದೆ .ಇದನ್ನು ನಮ್ಮ ರಾಜ್ಯದ ಬಿಜೆಪಿ ನಾಯಕರು ಮೊದಲು ತಿಳಿದುಕೊಳ್ಳಲಿ ತದನಂತರ ನಾಗೇಂದ್ರ ಅವರ ರಾಜೀನಾಮೆಯ ಬಗ್ಗೆ ಪ್ರತಿಭಟಿಸಲಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಹಾಗೂ ಉಡುಪಿ ನಗರಸಭೆ ನಾಮ ನಿರ್ದೇಶಿತ ಸದಸ್ಯರಾದ ಸುರೇಶ್ ಶೆಟ್ಟಿ ಬನ್ನಂಜೆ ಒತ್ತಾಯಿಸಿದ್ದಾರೆ.

