ಶಂಕರನಾರಾಯಣ: ಜೂನ್ ೪ (ಹಾಯ್ ಉಡುಪಿ ನ್ಯೂಸ್) ದನಗಳನ್ನು ಕದ್ದು ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದ ವ್ಯಕ್ತಿ ಯನ್ನು ಬಂಧಿಸಿದ ಘಟನೆ ನಡೆದಿದೆ.
ದಿನಾಂಕ 03/06/2022 ರಂದು 16:35ಘಂಟೆಗೆ ಕುಂದಾಪುರ ತಾಲೂಕು,ಕೊಡ್ಲಾಡಿ ಗ್ರಾಮದ,ಮಾರ್ಡಿ ಕೆಳಮನೆ ನಿವಾಸಿ ವಿದ್ಯಾಧರ ಶೆಟ್ಟಿ ಎಂಬಾತ ತನ್ನ KA-20-A- 6865 ನೇ ನಂಬ್ರದ ಪಿಕಪ್ ವಾಹನದಲ್ಲಿ ಕುಂದಾಪುರ ತಾಲೂಕಿನ ಕೊಡ್ಲಾಡಿ ಗ್ರಾಮದ ಹೊಲದ ಮನೆಗೆ ಹೋಗುವ ದಾರಿಯ ಬಳಿ ಮೇಯುತ್ತಿದ್ದ ಕಪ್ಪು ಬಣ್ಣದ ಗಂಡು ದನದ ಕರುವನ್ನು ಕಳವು ಮಾಡಿಕೊಂಡು ಅದಕ್ಕೆ ಯಾವುದೇ ಮೇವು ಬಾಯಾರಿಕೆ ನೀಡದೇ ಹಿಂಸಿಸುವ ರೀತಿಯಲ್ಲಿ ಕಾಲುಗಳನ್ನು ಹಗ್ಗದಿಂದ ಕಟ್ಟಿ ಹಿಂಸಾತ್ಮಕವಾಗಿ ಪಿಕಪ್ ವಾಹನದಲ್ಲಿ ತುಂಬಿಸಿ ಮಾಂಸ ಮಾಡಲು ಕಸಾಯಿಖಾನೆಗೆ ಸಾಗಾಟ ಮಾಡಲು ಹೊರಟಿದ್ದು ಆತನನ್ನು ಬಂಧಿಸಿದ್ದು ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಾಣಿ ಹಿಂಸೆ ತಡೆ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.