ಪಡುಬಿದ್ರಿ: ಜೂನ್:೪ (ಹಾಯ್ ಉಡುಪಿ ನ್ಯೂಸ್) ಬರ್ತ್ ಡೇ ಪಾರ್ಟಿ ಆಚರಿಸುವಾಗ ತಲವಾರು,ಕೊಡಲಿ ಬಳಸಿ ಕೇಕ್ ಕತ್ತರಿಸಿ ಭೀತಿ ಸ್ರಷ್ಟಿಸಿದ ಘಟನೆ ನಡೆದಿದೆ.
ಪಡುಬಿದ್ರಿ ಠಾಣಾ ವ್ಯಾಪ್ತಿಯ ಪಾದೆಬೆಟ್ಟು ಗ್ರಾಮದ ಪಡುಬಿದ್ರಿ ಕಾರ್ಕಳ ರಸ್ತೆಯ ನಿವಾಸಿ ಜೀತು ಯಾನೆ ಜಿತೇಂದ್ರ ಶೆಟ್ಟಿ ಎಂಬವರು ಈ ಹಿಂದೆಯೂ ಕೆಲವು ಹಿಂಬಾಲಕರೊಂದಿಗೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಆರೋಪಿತನಾಗಿರುತ್ತಾನೆ ಎನ್ನಲಾಗಿದ್ದು ,
ಕಳೆದ ಎರಡು ದಿನಗಳಿಂದ ಸ್ಥಳೀಯವಾಗಿ ಸಾಮಾಜಿಕ ಜಾಲತಾಣವಾದ ವಾಟ್ಸಪ್ ನಲ್ಲಿ ಒಂದು ಪೋಟೋ ಮತ್ತು ಒಂದು ವೀಡಿಯೋ ಹರಿದಾಡುತ್ತಿದ್ದು, ಅದರಲ್ಲಿ ಜೀತು ಯಾನೆ ಜಿತೆಂದ್ರ ಶೆಟ್ಟಿ, (52), ಆಶಾ ಸದನ, ಕಾರ್ಕಳ ರಸ್ತೆ, ಪಡುಬಿದ್ರಿ , ಮತ್ತು ಅವರ ಜೊತೆ ಈ ಹಿಂದೆ ಕೊಲೆಯತ್ನ ಪ್ರಕರಣದ ಆರೋಪಿಗಳಾಗಿದ್ದ 2]ಸೂರಜ್ ಸಾಲ್ಯಾನ್, (25) ಫಲಿಮಾರು ಹೊಸಾಗ್ಮೆ, ಹೆಜಮಾಡಿ ಕೋಡಿ, 3]ತನುಜ್ ಎಂ ಕರ್ಕೇರ, (25), ಕಾಡಿಪಟ್ನ, ಪಡುಬಿದ್ರಿ ಅಂಚೆ, ನಡ್ಸಾಲು ಗ್ರಾಮ, 4]ಅನ್ವೀಶ್ (23), ಕೋಟ್ಯಾರ್, ಪಡುಬಿದ್ರಿ ಅಂಚೆ, ನಡ್ಸಾಲು ಗ್ರಾಮ, , 5] ಗಣೇಶ ಪೂಜಾರಿ (50), ಬೀಚ್ ರಸ್ತೆ, ಪಡುಬಿದ್ರಿ, ನಡ್ಸಾಲು ಗ್ರಾಮ, ಕಾಪು 6] ನಿರಂಜನ್ ಶೆಟ್ಟಿಗಾರ್(31) ತಜೆ ಪಲ್ಕೆ ಮನೆ, ಕೆಮುಂಡೇಲು ಅಂಚೆ, ಎಲ್ಲೂರು ಗ್ರಾಮ,, 7] ಶರತ್ ಶೆಟ್ಟಿ ಯಾನೆ ಪುಟ್ಟ,(26), ಭಾಗಿ ನಿವಾಸ, ಫಲಿಮಾರು,ಅವರಾಲು ಅಂಚೆ, ಇವರು ಒಟ್ಟಾಗಿ ನಿರಂಜನ್ ಶೆಟ್ಟಿಗಾರ್ ನ ಬರ್ತ್ ಡೇ ಸೆಲೇಬ್ರೇಷನ್ ಮಾಡುವ ಫೊಟೋ ಮತ್ತು ವೀಡಿಯೋ ಮಾಡಿದ್ದು ದಿನಾಂಕ 30/05/2022 ರಂದು ರಾತ್ರಿ 21:30 ಗಂಟೆಗೆ ಬರ್ತ್ ಡೇ ಕೇಕ್ ನ ಒಂದು ಪಕ್ಕದಲ್ಲಿ ಒಂದು ಹರಿತವಾದ ತಲವಾರನ್ನು ಮತ್ತು ಇನ್ನೊಂದು ಪಕ್ಕದಲ್ಲಿ ಪರಶು (ಕೊಡಲಿ) ರೀತಿಯ ಆಯುಧವನ್ನು ಇಟ್ಟು ಫೊಟೋ ತೆಗೆದಿರುವುದು ಮತ್ತು ವೀಡಿಯೋದಲ್ಲಿ ನಿರಂಜನ್ ಶೆಟ್ಟಿಗಾರನು ತಲವಾರಿನಿಂದ ಕೇಕ್ ಕಟ್ ಮಾಡಿ ಸಂಭ್ರಮ ಆಚರಣೆ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಉಳಿದವರು ಅವನ ಅಕ್ಕಪಕ್ಕದಲ್ಲಿ ನಿಂತು ಸಂಭ್ರಮ ಆಚರಣೆ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಫೊಟೋ ಮತ್ತು ವೀಡಿಯೋ ಸ್ಥಳೀಯವಾಗಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ವೀಡಿಯೋ ಮತ್ತು ಫೊಟೋವನ್ನು ಜೀತು ಶೆಟ್ಟಿ ಮತ್ತವರ ಜೊತೆಯಲ್ಲಿದ್ದವರು ಮಾರಕ ಆಯುಧಗಳನ್ನು ಸ್ವಾಧೀನದಲ್ಲಿ ಇಟ್ಟುಕೊಂಡು ಮತ್ತು ಸಾರ್ವಜನಿಕರಿಗೆ ಭಯಭೀತಿ ಹುಟ್ಟಿಸುವ ಮತ್ತು ಪ್ರಚೋದನೆ ನೀಡುವ ಉದ್ದೇಶದಿಂದ ಆಯುಧಗಳ ಪ್ರದರ್ಶನವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಸಾರ್ವಜನಿಕರಲ್ಲಿ ಅಪರಾಧಿಕ ಭಯಬೀತಿ ಉಂಟು ಮಾಡುವ ಕೃತ್ಯ ಎಸಗಿದ್ದು, ಅವರ ವಿರುದ್ದ ಕ್ರಮ ಕೈಗೊಳ್ಳುವ ಉದ್ದೇಶದಿಂದ ಪಡುಬಿದ್ರಿ ಪೊಲೀಸರು ಜಿತೇಂದ್ರ ಶೆಟ್ಟಿಯ ಮನೆಯನ್ನು ಶೋಧನೆ ನಡೆಸಿ ಮಾರಕ ಆಯುಧಗಳಾದ ಕಬ್ಬಿಣದ ಮಚ್ಚು-01, ಕಬ್ಬಿಣದ ತಲವಾರ್-01, ಮತ್ತು ಕಬ್ಬಿಣದ ಕೊಡಲಿ (ಪರಶು)-01 ನ್ನು ಸ್ವಾಧಿನಪಡಿಸಿಕೊಂಡು ಜಿತೇಂದ್ರ ಶೆಟ್ಟಿ ಹಾಗೂ ಇತರರನ್ನು ಬಂಧಿಸಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಭಾರತೀಯ ಶಸ್ತ್ರಾಸ್ತ್ರ ಅಧಿನಿಯಮ ರಂತೆ ಪ್ರಕರಣ ದಾಖಲಾಗಿರುತ್ತದೆ.