images.jpeg
Spread the love

ಬೆಂಗಳೂರು: ದಿನಾಂಕ:ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು  ಗ್ರಹ ಮಂತ್ರಿ ಶ್ರೀ ಪ್ರಿಯಾಂಕ ಖರ್ಗೆ ಅವರನ್ನು ನಾಲಾಯಕ್ ಎಂದು ಮಾಧ್ಯಮಗಳ ಮುಂದೆ ಹೇಳಿರುವುದಕ್ಕೆ ಪ್ರಿಯಾಂಕ ಖರ್ಗೆ ಯವರು ಬಿವೈ ವಿಜಯೇಂದ್ರರಿಗೆ ಕಟುವಾಗಿ ಉತ್ತರಿಸಿದ್ದಾರೆ-

-ಗೃಹ ಸಚಿವನಾಗಿ ಅಧಿಕಾರ ಸ್ವೀಕರಿಸಿ ಕೆಲವೇ ವಾರಗಳಾಗಿವೆ. ಅಷ್ಟರಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಭಯ ಹಾಗೂ ಹತಾಶೆ ಶುರುವಾಗಿರುವುದು ಅವರ ಘನತೆಗೆ ತಕ್ಕದ್ದೇ? ಎಂಬದನ್ನ ನಾನು ಪ್ರಶ್ನಿಸಲು ಹೋಗುವುದಿಲ್ಲ.

ಪಾಪ ಪಿಎಸ್ಐ ನೇಮಕಾತಿ ಹಗರಣದಲ್ಲಿ ಸಿಕ್ಕಿಬಿದ್ದ ನೋವು ಅವರಲ್ಲಿ ಇನ್ನೂ ಮಾಸಿದಂತೆ ಕಾಣುತ್ತಿಲ್ಲ.

ವಿಜಯೇಂದ್ರ ನನಗಿಂತ ಮೂರ್ನಾಲ್ಕು ವರ್ಷ ಹಿರಿಯರಾಗಿರಬಹುದು. ಆದರೆ ವಯಸ್ಸಿನಲ್ಲಿ ಹಿರಿಯನಾದ ತಕ್ಷಣ ಬಾಯಿಗೆ ಬಂದಂತೆ
ಮಾತನಾಡುವ ಪರವಾನಗಿ ಸಿಕ್ಕಂತಲ್ಲ.

ನಿಷ್ಪ್ರಯೋಜಕ ಅಥವಾ ಅಸಮರ್ಥ ಎಂದು ಕೈಲಾಗದ ವಿರೋಧ ಪಕ್ಷದಿಂದ ಟೀಕೆ ಕೇಳುವುದು POCSO ಪ್ರಕರಣದ ಆರೋಪಿ ಆಗಿರುವುದಕ್ಕಿಂತ ಸಾವಿರ ಪಟ್ಟು ಮೇಲು ಎಂದು ನಾನು ಭಾವಿಸುತ್ತೇನೆ.

ಸಾಮಾನ್ಯ ಜ್ಞಾನ ಎಲ್ಲರ ಮನೆಯಲ್ಲಿ ಅರಳುವ ಹೂವಲ್ಲ ಎಂಬ ವಾಸ್ತವಕ್ಕೆ ತಾವೂ ಸಾಕ್ಷಿಯಾಗುತ್ತಿರುವಂತಿದೆ. ಮಾತುಗಳಿಗೆ ಸ್ವಯಂ ಮಿತಿ ಇರಬೇಕು. ಇಲ್ಲವಾದರೆ ಹೇಗೆ ಮಾತನಾಡಬೇಕೆಂಬುದನ್ನ ಕಲಿಸಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಗ್ರಹ ಮಂತ್ರಿ ಪ್ರಿಯಾಂಕ ಖರ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

error: No Copying!