ದೆಹಲಿ: ದಿನಾಂಕ:25-07-2026(ಹಾಯ್ ಉಡುಪಿ ನ್ಯೂಸ್) ಜಂತರ್ ಮಂತರ್ ನಲ್ಲಿ ಕಳೆದ ಒಂದು ತಿಂಗಳಿನಿಂದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಮತ್ತು ಇನ್ನಿತರ ಬೇಡಿಕೆ ಯನ್ನು ಮುಂದಿಟ್ಟುಕೊಂಡು ಸೋಶಿಯಲ್ ಮೀಡಿಯಾ ಮೂವ್ಮೆಂಟ್ ಮೂಲಕ ಜನ್ಮ ತಾಳಿದ ಕಾಕ್ರೋಚ್ ಜನತಾ ಪಾರ್ಟಿಯು ,ಸಿಜೆಪಿ ಯ ಸಂಸ್ಥಾಪಕ ಅಭಿಜಿತ್ ಧೀಪ್ಕೆ ನೇತೃತ್ವದಲ್ಲಿ ನಡೆಯುತ್ತಿದ್ದ ಅಹೋರಾತ್ರಿ ಧರಣಿಯ ಫಲವಾಗಿ ಇಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕಾಕ್ರೋಚ್ ಜನತಾ ಪಾರ್ಟಿ ಜಂತರ್ ಮಂತರ್ ನಲ್ಲಿ ಇತಿಹಾಸ ಸ್ರಷ್ಟಿಸಿದೆ.
ಜಿರಳೆ ಗಳನ್ನು ಕೇವಲವಾಗಿ ಪರಿಗಣಿಸಿ ಅವರ ಬಗ್ಗೆ ದೇಶ ದ್ರೋಹಿಗಳು ,ವಿದೇಶಿಗರ ಏಜೆಂಟರು, ಗಲಭೆಕೋರರು, ದೇಶದಲ್ಲಿ ಅಭದ್ರತೆ ಸ್ರಷ್ಟಿಸುವ ಸಂಚುಕೋರರು ಎಂದು ಏನೆಲ್ಲಾ ಆರೋಪ ಹೊರಿಸಿ ಜಿರಳೆಗಳ ಸಂವಿಧಾನಾತ್ಮಕ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ವನ್ನು ಕೇಂದ್ರ ಸರ್ಕಾರ ಹಾಗೂ ಭಾರತೀಯ ಜನತಾ ಪಾರ್ಟಿ ಯ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಇನ್ನಿಲ್ಲದ ಅಪಪ್ರಚಾರ ನಡೆಸಿದರೂ ಕೂಡ ವಿದ್ಯಾವಂತ ಜಿರಳೆಗಳು ದೇಶದ ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾದರು.
ಸಮುದ್ರದ ಅಲೆಗಳಂತೆ ದೇಶದ ಮೂಲೆ ಮೂಲೆಗಳಿಂದ ಜಂತರ್ ಮಂತರ್ ನತ್ತ ಹರಿದು ಬಂದ ವಿದ್ಯಾವಂತ ಯುವ ಜಿರಳೆಗಳು ಅಹೋರಾತ್ರಿ ನಡೆಸಿದ ಧರಣಿ ದೇಶ ಹಾಗೂ ವಿದೇಶಗಳಲ್ಲಿಯೂ ಜಿರಳೆಗಳಿಗೆ ಅಭೂತಪೂರ್ವ ಬೆಂಬಲ ದೊರೆಯುತ್ತಿರುವುದನ್ನು ಮನಗಂಡ ಕೇಂದ್ರ ಸರ್ಕಾರ ಪ್ರತಿಭಟನೆಯನ್ನು ಹತ್ತಿಕ್ಕಲು ದೆಹಲಿ ಪೊಲೀಸರನ್ನು ಬಳಸಿ ಜಿರಳೆಗಳ ಮೇಲೆ ಲಾಠಿ ಪ್ರಹಾರ ನಡೆಸಿ ಇನ್ನಿಲ್ಲದ ಚಿತ್ರ ಹಿಂಸೆ ನೀಡಿದರೂ ಕೂಡ ಹಿಂಸಾಚಾರಕ್ಕೆ ಇಳಿಯದ ವಿದ್ಯಾವಂತ ಜಿರಳೆಗಳು ಎಲ್ಲಾ ರೀತಿಯ ಪ್ರಭುತ್ವ ದ ಹಾಗೂ ಪೊಲೀಸ್ ದೌರ್ಜನ್ಯ ಹಾಗೂ ಪೊಲೀಸರ ವೇಷದಲ್ಲಿ ಬಂದಿದ್ದ ಗೂಂಡಾ ಗಳಿಂದ ಕ್ರೂರವಾಗಿ ಥಳಿಸಿ ಕೊಂಡರೂ ಕೂಡ ಶಾಂತಿಯಿಂದ ಪ್ರತಿಭಟನೆ ಮುಂದುವರಿಸಿದ್ದರು.
ವಿದ್ಯಾವಂತ ಯುವ ಜಿರಳೆಗಳನ್ನು ಕೇಂದ್ರ ಸರ್ಕಾರ ಅಮಾನುಷವಾಗಿ ಥಳಿಸಿದ ಮೇಲಂತೂ ಯುವ ಜಿರಳೆಗಳಿಗಂತೂ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಹಿರಿಯರು,ಹೆತ್ತವರು , ಮಕ್ಕಳು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ದೆಹಲಿಯತ್ತ ಹೆಜ್ಜೆ ಹಾಕಿದ್ದರು.
ಇನ್ನೇನು ದೇಶ ವ್ಯಾಪಿ ಯುವ ಜಿರಳೆಗಳು ದಂಗೆಯೇಳುವ ಅಪಾಯ ಅರಿತ ಕೇಂದ್ರ ಸರ್ಕಾರ ಕೊನೆಗೂ ಇಂದು ಜಿರಳೆಗಳೊಂದಿಗೆ ಮಾತುಕತೆ ನಡೆಸಿ ಜಿರಳೆಗಳ ಬೇಡಿಕೆಯನ್ನು ಈಡೇರಿಸುವ ಭರವಸೆಯನ್ನು ನೀಡಿದ್ದಾರೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಡವಾಗಿ ಆದರೂ ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆ ಮೂಲಕ ನೀಟ್ ಪರೀಕ್ಷೆಯ ಅಕ್ರಮಗಳಿಂದ ಮನನೊಂದು ಜೀವ ಕಳೆದುಕೊಂಡ ವಿದ್ಯಾರ್ಥಿ ಗಳಿಗೆ ಸತ್ತ ನಂತರವೂ ಜಿರಳೆಗಳು ನ್ಯಾಯವನ್ನು ದೊರಕಿಸಿ ಕೊಡುವಲ್ಲಿ ಯಶಸ್ವಿ ಯಾಗಿದ್ದಾರೆ.
ಜಿರಳೆ ಗಳನ್ನು ಹೀಯಾಳಿಸಿ ಅವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ನಗುತ್ತಿದ್ದ ವರಿಗೆ ಇದೀಗ ಜಿರಳೆಗಳ ತಾಕತ್ತು ಅರ್ಥವಾಗಿರಬಹುದು. ವಿರೋಧ ಪಕ್ಷಗಳು ಸಂಸತ್ತಿನ ಒಳಗಾಗಲಿ,ಹೊರಗಾಗಲಿ ಮಾಡಲಾಗದ ಕೆಲಸವನ್ನು ಕೇವಲ ಎರಡು ತಿಂಗಳಲ್ಲಿ ಹುಟ್ಟಿ ಬೆಳೆದ ಸಾಮಾಜಿಕ ಜಾಲತಾಣದ ಜಿರಳೆ ಪಕ್ಷ ಮಾಡಿತೆಂದರೆ ಭಾರತದ ಪ್ರಜಾಪ್ರಭುತ್ವ, ಭಾರತದ ಸಂವಿಧಾನ ಇನ್ನೂ ಜೀವಂತವಾಗಿ ಇರುವುದಕ್ಕೆ ಸಾಕ್ಷಿಯಾಗಿದೆ. ದೇಶದ ಯುವ ಶಕ್ತಿ ದೇಶದ ಆಸ್ತಿ. ಶಿಕ್ಷಣ, ಉದ್ಯೋಗ ದ ವಿಷಯದಲ್ಲಿ ಯಾವುದೇ ರಾಜಕೀಯ ಪಕ್ಷಗಳು ನಿರ್ಲಕ್ಷ್ಯ ತೋರಿದಲ್ಲಿ ದೇಶದ ಯುವ ಜನತೆ ಯಾವ ರೀತಿ ಪ್ರತಿಭಟಿಸುತ್ತಾರೆ,ಅದರ ಪರಿಣಾಮ ಏನಾಗಬಹುದು? ಸರಕಾರಗಳನ್ನೇ ಉರುಳಿಸುವ ಶಕ್ತಿ ಈ ಯುವ ಜನತೆ ಯಲ್ಲಿದ್ದು ಅವರನ್ನು ಹತ್ತಿಕ್ಕುವ ಪ್ರಯತ್ನ ಮಾಡದೆ ಅವರೊಂದಿಗೆ ಶಾಂತಿಯುತವಾಗಿ ಮಾತನಾಡಿದಲ್ಲಿ ಮಾತ್ರ ಸಮಸ್ಯೆ ಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದೇ ಸರ್ಕಾರಗಳಿಗೆ ಜಿರಳೆಗಳು ಕಲಿಸಿದ ಪಾಠ.


