images-1.jpeg
Spread the love

ಮಣಿಪಾಲ: ದಿನಾಂಕ:24-07-2026(ಹಾಯ್ ಉಡುಪಿ ನ್ಯೂಸ್) ಶಾಂತಿ ನಗರ ಪರಿಸರದಲ್ಲಿ ತಡ ರಾತ್ರಿ ದನ ಕಳ್ಳತನ ನಡೆದಿರುವ ಬಗ್ಗೆ ಪ್ರತ್ಯಕ್ಷದರ್ಶಿಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.

ಪರ್ಕಳ ನಿವಾಸಿ ಧೀಕ್ಷಿತ್‌ ಶೆಟ್ಟಿ (26) ಎಂಬವರು ದಿನಾಂಕ 22/07/2026 ರಂದು ಬೆಳಿಗ್ಗೆ 01:30 ಗಂಟೆಗೆ ಶಾಂತಿನಗರದ ರಸ್ತೆಯಲ್ಲಿ ಬರುತ್ತಿರುವಾಗ ಒಂದು ದನವು ಮಲಗಿಕೊಂಡಿದ್ದು, ಆ ಸಮಯ ಅಲ್ಲಿಗೆ ಒಂದು ನೀಲಿ ಬಣ್ಣದ ಮಾರುತಿ ಬೊಲೆನೊ ನಂಬ್ರ KA-03-MX-1159 ಕಾರಿನಲ್ಲಿ 03 ಜನರು ಬಂದು ರಸ್ತೆಯಲ್ಲಿ ಮಲಗಿದ್ದ ದನವನ್ನು ಕಳ್ಳತನ ಮಾಡಿಕೊಂಡು ಕಾರಿನಲ್ಲಿ ತುಂಬಿಸಿಕೊಂಡು ಅಲೆವೂರು ಮಾರ್ಗವಾಗಿ ಗಣಪತಿ ದೇವಸ್ಥಾನ ಕಡೆಗೆ ಹೋಗಿರುವುದಾಗಿ ಮಣಿಪಾಲ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ದೀಕ್ಷಿತ್ ಶೆಟ್ಟಿ ಯವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ  ಕಲಂ: 303(2) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!