ಕಾರ್ಕಳ: ದಿನಾಂಕ :24-07-2026(ಹಾಯ್ ಉಡುಪಿ ನ್ಯೂಸ್) ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಸರ್ಕಾರಿ ಹಾಡಿಯಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶಿವಕುಮಾರ್ ಅವರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಪೊರ್ಲೊಟ್ಟುಗುತ್ತು ಕುಬೇರ ಕೋಳಿ ಫಾರ್ಮ್ ಎಂಬಲ್ಲಿರುವ ಸರಕಾರಿ ಹಾಡಿ ಪ್ರದೇಶದ ಖಾಲಿ ಜಾಗದಲ್ಲಿ 1.ರಕ್ಷಿತ್ ಶೆಟ್ಟಿ, 2. ಪ್ರವೀಣ ದೇವಾಡಿಗ ಹಾಗೂ ಇತರರು ತಮ್ಮ ಸ್ವಂತ ಲಾಭಕ್ಕೊಸ್ಕರ ಕೋಳಿಗಳ ಕಾಲಿಗೆ ಹಿಂಸಾತ್ಮಕ ರೀತಿಯಲ್ಲಿ ಹರಿತವಾದ ಚೂರಿಯನ್ನು ಕಟ್ಟಿ, ಕೋಳಿಗಳ ಮೇಲೆ ಹಣವನ್ನು ಪಣವಾಗಿಟ್ಟು ಜೂಜಾಟ ಆಡುತ್ತಿರುವುದಾಗಿ ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶಿವಕುಮಾರ್ ಅವರಿಗೆ ದೊರೆತ ಮಾಹಿತಿಯಂತೆ ದಾಳಿ ಮಾಡಿ ಜೂಜಾಟಕ್ಕೆ ಉಪಯೋಗಿಸಿದ 12,000/- ರೂಪಾಯಿ ಬೆಲೆಯ ಜೀವಂತ ಕೋಳಿಗಳು -5, ಕೋಳಿಗಳನ್ನು ಕಟ್ಟಲು ಉಪಯೋಗಿಸಿದ ಹಗ್ಗ – 5, ನಗದು ಹಣ 4,370/- ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 112(1) BNS 87, 93 KP Açt 11(1)(ಎನ್) Prevention Of Cruelty to Animals Acẗ 1960 ರಂತೆ ಪ್ರಕರಣ ದಾಖಲಾಗಿದೆ.
