ಪಡುಬಿದ್ರಿ: ದಿನಾಂಕ:22-07-2026 (ಹಾಯ್ ಉಡುಪಿ ನ್ಯೂಸ್) ಕಾಪು ತಾಲೂಕು ಬಡಾ ಗ್ರಾಮದ ಎರ್ಮಾಳು ಎಂಬಲ್ಲಿ ಗಾಂಜಾ ಗೋಲಿಗಳನ್ನು ಮಾರಾಟ ಮಾಡುತ್ತಿದ್ದ ಪಾನ್ ಸ್ಟಾಲ್ ಮಾಲೀಕನನ್ನು ಪಡುಬಿದ್ರಿ ಪೊಲೀಸ್ ಠಾಣೆಯ ಪಿಎಸ್ಐ ಸಕ್ತಿವೇಲು ಅವರು ಬಂಧಿಸಿದ್ದಾರೆ.
ಪಡುಬಿದ್ರಿ ಠಾಣಾ ಪಿ.ಎಸ್.ಐ ಸಕ್ತಿವೇಲು ಅವರಿಗೆ ದಿನಾಂಕ: 22.07.2026 ರಂದು ಬೆಳಿಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಪಡುಬಿದ್ರೆ ಪೊಲೀಸ್ ಠಾಣಾ ಸರಹದ್ದಿನ ಕಾಫು ತಾಲೂಕು ಬಡಾ ಗ್ರಾಮದ ಎರ್ಮಾಳು ಎಂಬಲ್ಲಿ ಇರುವ ಅನೀಲ್ ಪಾನ್ ಸ್ಟಾಲ್ ನಲ್ಲಿ ಪರವಾನಿಗೆ ಇಲ್ಲದೆ ಅಕ್ರಮವಾಗಿ ನಿಷೇದಿತ ಮಾದಕ ವಸ್ತು ( ಗಾಂಜಾಗೋಲಿ ) ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ ಮಾಹಿತಿಯಂತೆ ಕೂಡಲೇ ಸ್ಥಳಕ್ಕೆ ದಾಳಿ ನಡೆಸಿ ಅನಿಲ್ ಎಂಬಾತನನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ .
ಆತನ ಅನೀಲ್ ಪಾನ್ ಸ್ಟಾಲ್ ಅಂಗಡಿಯನ್ನು ಶೋಧನೆ ಮಾಡಿ ಪರಿಶೀಲಿಸಿದಾಗ ಅಂಗಡಿಯಲ್ಲಿ ಆರೋಪಿ ಅನಿಲ್ ನು ಸಾರ್ವಜನಿಕರಿಗೆ ಮಾರಾಟ ಮಾಡಲು ಇಟ್ಟಿದ್ದ ಒಟ್ಟು ಸುಮಾರು 625.83 ಗ್ರಾಂ ತೂಕದ ಅಂದಾಜು ಮೌಲ್ಯ ರೂ 4000/ ಮೊತ್ತದ ಗಾಂಜಾಗೋಲಿಗಳನ್ನು ಹಾಗೂ ಗಾಂಜಾಗೋಲಿಗಳನ್ನು ಮಾರಾಟ ಮಾಡಿ ಸಂಗ್ರಹಿಸಿದ ನಗದು ರೂ 600/ ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕಲಂ 8 (c), 20(b)(II)(A) NDPS Act ರಂತೆ ಪ್ರಕರಣ ದಾಖಲಾಗಿದೆ.
