ಉಡುಪಿ: ದಿನಾಂಕ: 20-07-2026(ಹಾಯ್ ಉಡುಪಿ ನ್ಯೂಸ್) ಕಡಿಯಾಳಿ ನಿವಾಸಿಯೋರ್ವರ ಬ್ಯಾಂಕ್ ಖಾತೆ ಯಿಂದ ಸೈಬರ್ ವಂಚಕರು 5.11ಲಕ್ಷ ರೂಪಾಯಿ ವಂಚಿಸಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದಾರೆ.
ನಗರದ ಕಡಿಯಾಳಿ ನಿವಾಸಿ ಉಸ್ಮಾನ್ ಸಾಹೇಬ್ (66) ಎಂಬವರು ತನ್ನ ಎಸ್‌ಬಿ ಖಾತೆಯಿಂದ Friendship Club ನ ಸದಸ್ಯತ್ವ ಪಡೆಯಲು ತಮ್ಮ ಖಾತೆಯಿಂದ ಹಣವನ್ನು ದಿನಾಂಕ 27/06/2026 ರಂದು 29000, ದಿನಾಂಕ 09/07/2026 ರಂದು 84,882, ದಿನಾಂಕ 09/07/2026 ರಂದು 99000, ದಿನಾಂಕ 09/07/2026 ರಂದು 99000, ದಿನಾಂಕ 14/07/2026 ರಂದು 2,00,000 ರೂವನ್ನು ಗೂಗಲ್ ಪೇ, QR scanneŗ ಮತ್ತು ಖಾತೆಯ ಮೂಲಕ ಕಳುಹಿಸಿದ್ದು ನಂತರ ತಿಳಿಯುವಾಗ ಇದು Online froud ಆಗಿದ್ದು ಯಾರೋ ಸೈಬರ್ ವಂಚಕರು ಉಸ್ಮಾನ್ ಸಾಹೇಬರ ಖಾತೆಯಿಂದ ಒಟ್ಟು 5,11, 882 ರೂಪಾಯಿ ಹಣವನ್ನು ಆನ್ ಲೈನ್ ವಂಚನೆ ಯ ಮೂಲಕ ಕದ್ದಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ:318(4),BNS 66(D) IT ACT ರಂತೆ ಪ್ರಕರಣ ದಾಖಲಾಗಿದೆ.
