ಉಡುಪಿ: ದಿನಾಂಕ:16-07-2026(ಹಾಯ್ ಉಡುಪಿ ನ್ಯೂಸ್) ಫೇಸ್ ಬುಕ್ ನಲ್ಲಿ ಹೂಡಿಕೆ ಯಿಂದ ಅಧಿಕ ಲಾಭ ದ ಜಾಹೀರಾತು ನೋಡಿ ಆಮಿಷಕ್ಕೊಳಗಾದ ವ್ಯಕ್ತಿ ಯೋರ್ವರು 3.90 ಲಕ್ಷ ರೂಪಾಯಿ ವಂಚನೆಗೆ ಒಳಗಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ನಗರದ ನಿವಾಸಿ ಶ್ರೀನಿವಾಸ ಅಚಾರ್ ಎಂಬವರು ಉಡುಪಿ ಶಾಖೆಯ ಐಸಿಐಸಿಐ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿದ್ದು, ಫೇಸ್‌ಬುಕ್‌ನಲ್ಲಿ (Facebook) ಆಗಾಗ್ಗೆ ಮುಖ್ಯ ವ್ಯಕ್ತಿಗಳ ಹೆಸರಿನಲ್ಲಿ ಕೇವಲ ರೂಪಾಯಿ 20000 – 25000/- ಹೂಡಿಕೆ ಮಾಡುವ ಮೂಲಕ ಅವರು ಹೇಗೆ ಭಾರಿ ಆದಾಯ ಗಳಿಸಿದರು ಎಂಬುದನ್ನು ತೋರಿಸುವ ಜಾಹೀರಾತುಗಳು/ಸುದ್ದಿಗಳು ಬರುತ್ತಿರುತ್ತವೆ. “ನೀವು ಅದೃಷ್ಟವಂತರಾಗಿದ್ದರೆ, ಇಂದೇ ಗುಂಪಿಗೆ ಸೇರಲು ನಿಮಗೆ ಆಹ್ವಾನ ನೀಡಲಾಗುವುದು, ಏಕೆಂದರೆ ಇಂದು ಸೇರಲು ಕೊನೆಯ ದಿನವಾಗಿದೆ” ಎಂದು ಅದರಲ್ಲಿ ಬರೆಯಲಾಗಿತ್ತು. ಅದರಂತೆ ಜೂನ್ 8, 2026 ರಂದು ಆ ಗುಂಪಿಗೆ ಸೇರಲು ಆಹ್ವಾನ ಬಂದಿತ್ತು ಆಮಿಷಕ್ಕೆ ಒಳಗಾಗಿ ಶ್ರೀನಿವಾಸ ಆಚಾರ್ ರ 3,89,387.70/-ರೂಪಾಯಿ ವಂಚಕರ ಪಾಲಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಶ್ರೀನಿವಾಸ ಆಚಾರ್ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 318(4), 66(D) IT ACT ರಂತೆ ಪ್ರಕರಣ ದಾಖಲಾಗಿದೆ.
