IMG_20260716_191853.jpg
Spread the love

ಉಡುಪಿ: ದಿನಾಂಕ:  16/07/2026 (ಹಾಯ್ ಉಡುಪಿ ನ್ಯೂಸ್) ನಗರದ ಮಿಷನ್ ಕಂಪೌಂಡ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿಯನ್ನು ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಭರತೇಶ ಕಂಕಣವಾಡಿ ಅವರು ಬಂಧಿಸಿದ್ದಾರೆ.

ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಭರತೇಶ್‌ ಕಂಕಣವಾಡಿ ಅವರಿಗೆ ದಿನಾಂಕ:15-07-2026 ರಂದು 76 ನೇ ಬಡಗುಬೆಟ್ಟು ಗ್ರಾಮದ ಮಿಷನ್‌ ಕಂಪೌಂಡ್‌ ಬಳಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿ ಮಟ್ಕಾ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ದಾಳಿ ನಡೆಸಿದ್ದು, ಸ್ಥಳದಲ್ಲಿ ಮಟ್ಕಾ ಜುಗಾರಿ ಆಟಕ್ಕೆ ಹಣ ಸಂಗ್ರಹಿಸಿ ಚೀಟಿ ಬರೆದು ಕೊಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ .

ಆತನ ಹೆಸರು ವಿಳಾಸ ವಿಚಾರಣೆ ನಡೆಸಿದಾಗ ಕೃಷ್ಣ ಪೂಜಾರಿ(38),ಕಕ್ಕುಂಜೆ, ಕೋಂಬೆ, ಶಿವಳ್ಳಿ ಗ್ರಾಮ ಎಂಬುದಾಗಿ ತಿಳಿಸಿರುತ್ತಾನೆ. ವಶಕ್ಕೆ ಪಡೆದ ಆಪಾದಿತ ಕ್ರಷ್ಣ ಪೂಜಾರಿಯನ್ನು ವಿಚಾರಿಸಿದಾಗ ತಾನು ಕಮಿಷನ್‌ ಹಣದ ಆಸೆಗೋಸ್ಕರ ಅಂಬಾಗಿಲಿನ ಲಿಯೋ ಕರ್ನಾಲಿಯೋ ಹೇಳಿದಂತೆ ಅವರಿಗೆ ಲಾಭಗಳಿಸಿಕೊಡುವ ಉದ್ದೇಶದಿಂದ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟದ ಬಗ್ಗೆ ಅಂಕೆ ಸಂಖ್ಯೆಗಳ ಮೇಲೆ ಹಣ ಹೂಡುವಂತೆ ಹೇಳಿ ಚೀಟಿಯಲ್ಲಿ ನಮೂದು ಮಾಡಿಕೊಂಡು ಹಣವನ್ನು ಸಂಗ್ರಹಿಸುತ್ತಿರುವುದಾಗಿ ತಿಳಿಸಿರುತ್ತಾನೆ.

ಆಪಾದಿತ ಕ್ರಷ್ಣ ಪೂಜಾರಿಯ ಬಳಿ ಮಟ್ಕಾ ಜುಗಾರಿ ಆಟಕ್ಕೆ ಸಂಗ್ರಹಿಸಿದ ನಗದು ಹಣ ರೂಪಾಯಿ 890/- ಮತ್ತು ಮಟ್ಕಾ ನಂಬ್ರ ಬರೆದ ಚೀಟಿ, ಬಾಲ್‌ಪೆನ್‌ ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ: 78(i) (iii) KP ACŢ, 3(5) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!