ಬೈಂದೂರು: ದಿನಾಂಕ:15-07-2026(ಹಾಯ್ ಉಡುಪಿ ನ್ಯೂಸ್) ಕೆರ್ಗಾಲ್ ಗ್ರಾಮದ ನಿವಾಸಿ ಯೋರ್ವರಿಗೆ ಹೆರಂಜಾಲು ಗ್ರಾಮದ ನಾಲ್ವರು ವ್ಯಕ್ತಿಗಳು ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಬೈಂದೂರು ಕೆರ್ಗಾಲ್ ಗ್ರಾಮದ ನಂದನವನ ನಿವಾಸಿ ಗಿರೀಶ (29) ಅವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು ತನ್ನ ಸ್ನೇಹಿತ ಜನಾರ್ಧನ ಮೊಗವೀರ ಎಂಬವರೊಂದಿಗೆ ದಿನಾಂಕ 13-07-2026 ರಂದು ರಾತ್ರಿ ಕಿರಿಮಂಜೇಶ್ವರದಲ್ಲಿ ಮರದ ಲೋಡಿಂಗ್ ಕೆಲಸ ಮುಗಿಸಿ ಬಳಿಕ ಜನಾರ್ಧನ ಮೊಗವೀರರವರನ್ನು ಅವರ ಮನೆ ಹೇರಂಜಾಲುಗೆ ಬಿಟ್ಟು ಬರಲು ತಮ್ಮ ಬೈಕ್‌ನಲ್ಲಿ ಕುಳ್ಳಿರಿಸಿಕೊಂಡು ಹೋಗುತ್ತಿದಾಗ ರಾತ್ರಿ 10:30 ಗಂಟೆ ಸುಮಾರಿಗೆ ಹೆರಂಜಾಲು ಗ್ರಾಮದ ಆಶ್ರಯ ಕಾಲೋನಿ ಜಂಕ್ಷನ್ ನಲ್ಲಿ ಆರೋಪಿ ವೇಧನಾಥ ಶೆಟ್ಟಿ,ಶಿವರಾಜ ಪೂಜಾರಿ, .ಪೃಥ್ವಿರಾಜ ಶೆಟ್ಟಿ,ಮಣಿಕಂಠ ಪೂಜಾರಿ ಯವರು ಗಿರೀಶರವರು ಹೋಗುತ್ತಿದ್ದ ಮೋಟರ್ ಸೈಕಲ್ ನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ಗಿರೀಶ ರಿಗೆ ನೀನು ಇಲ್ಲಿ ಏಕೆ ಬಂದಿದ್ದೀಯಾ? ಜನಾರ್ಧನ ಜೊತೆಗೆ ಸೇರುದ್ಯಾಕೆ ನೀನು ನಮ್ಮ ಊರನ್ನು ಹಾಳು ಮಾಡಲು ಬಂದಿದ್ದೀಯಾ ಎಂದು ಅವಾಚ್ಯವಾಗಿ ಬೈದು, ಗಿರೀಶರಿಗೆ ಕೈಯಿಂದ ಎದೆಗೆ ಹೊಡೆದು ಆಗ ಜಗಳ ಬಿಡಿಸಲು ಹೋದ ಜನಾರ್ಧನರವರಿಗೂ ಕೈಯಿಂದ ಬಲ ಕೆನ್ನೆಗೆ ಕೈಯಿಂದ ಹೊಡೆದು ಕಾಲಿನಿಂದ ತುಳಿದು ಹಲ್ಲೆ ಮಾಡಿರುತ್ತಾರೆ.
ಅಲ್ಲದೇ ಆರೋಪಿಗಳು ಗಿರೀಶ ರಿಗೆ ಮತ್ತು ಜನಾರ್ಧನ ಮೊಗವೀರರಿಗೆ ಇವತ್ತಲ್ಲ ನಾಳೆ ಕೊಲ್ಲದೇ ಬಿಡುವುದಿಲ್ಲವಾಗಿ ಜೀವ ಬೆದರಿಕೆ ಹಾಕಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ 126(2) 352 115(2) 131 118(1) r/w 3(5) BNS ಕಲಂ 3(1) (r )(s ) 3(2)(v-a) SC/St Act 2015 ರಂತೆ ಪ್ರಕರಣ ದಾಖಲಾಗಿದೆ.
