IMG_20260715_140712.jpg
Spread the love

ಮಣಿಪಾಲ: ದಿನಾಂಕ:15-07-2026 (ಹಾಯ್ ಉಡುಪಿ ನ್ಯೂಸ್) ಆರೋಗ್ಯ ಸಮಸ್ಯೆ ಯಿಂದ ಬಳಲುತ್ತಿರುವ ಹಿರಿಯ ನಾಗರಿಕರೋರ್ವರನ್ನು ಅವರ ಹೆಂಡತಿ ಮತ್ತು ಮಕ್ಕಳೇ ರೈಲ್ವೇ ನಿಲ್ದಾಣದಲ್ಲಿ ತಂದು ಬಿಟ್ಟು ಹೋಗಿರುವ ಘಟನೆ ಉಡುಪಿಯ ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.

ಮುಂಬಯಿ ನಿವಾಸಿ ಜಗದೀಶ ಶೆಟ್ಟಿ (67) ಇವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವಾಗ ಜಗದೀಶ ಶೆಟ್ಟಿ ಯವರ ಹೆಂಡತಿ ಸುನಂದ ಹೆಣ್ಣು ಮಕ್ಕಳಾದ ಶ್ವೇತಾ, ನೀತಾ ಮತ್ತು ಮಗನಾದ ನಿತಿನ್‌ ರವರು ಜಗದೀಶ ಶೆಟ್ಟಿ ಯವರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ನೀಡಿ ಅವರಿಗೆ ಊಟ ತಿಂಡಿ ನೀಡದೇ ಹಾಗೂ ಅವರಿಗೆ ಚಿಕಿತ್ಸೆ ಕೊಡಿಸದೇ ದಿನಾಂಕ 11/07/2026 ರಂದು ಬೊಂಬಾಯಿ ಪನ್ವೆಲ್‌ ನಿಂದ ಬಲವಂತವಾಗಿ ಉಡುಪಿಗೆ ಕರೆದುಕೊಂಡು ಬಂದು ದಿನಾಂಕ 12/07/2026 ರಂದು ಬೆಳಿಗ್ಗೆ 8:30 ಗಂಟೆ ಸಮಯಕ್ಕೆ ಜಗದೀಶ ಶೆಟ್ಟಿ ಯವರನ್ನು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಇಂದ್ರಾಳಿ ರೈಲ್ವೆ ಸ್ಟೇಷನ್‌ ಬಳಿ ಜಗದೀಶ ಶೆಟ್ಟಿ ಯವರನ್ನು ನೋಡುವುದಿಲ್ಲ ಎಂದು ತ್ಯಜಿಸಿ ರಿಕ್ಷಾದಲ್ಲಿ ಬಿಟ್ಟು ಅಲ್ಲಿಂದ ಎಲ್ಲಿಗೋ ಹೋಗಿರುತ್ತಾರೆ.

ಜಗದೀಶ ಶೆಟ್ಟಿ ಯವರು ಹಿರಿಯ ನಾಗರೀಕರಾಗಿದ್ದು ಅವರ ರಕ್ಷಣೆ ಹಾಗೂ ಆರೈಕೆಗೆ ಜವಬ್ದಾರಿಯಾಗಿರುವ ಅವರ ಹೆಂಡತಿ ಮಕ್ಕಳು ಅವರ ಆರೈಕೆ ಮತ್ತು ರಕ್ಷಣೆ ಮಾಡದೇ ತೊಂದರೆ ನೀಡುತ್ತಿರುವುದಾಗಿ ಜಗದೀಶ ಶೆಟ್ಟಿ ಯವರು ಪೊಲೀಸರಿಗೆ ನೀಡಿದ ದೂರಿನಲ್ಲಿ ದೂರಿ ಕೊಂಡಿದ್ದಾರೆ.

ಜಗದೀಶ ಶೆಟ್ಟಿ ಯವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ  ಕಲಂ: 24 Maintenance and Welfare Of Parents and Senior Citizens Act 2007 ರಂತೆ ಪ್ರಕರಣ ದಾಖಲಾಗಿದೆ.

error: No Copying!