Spread the love

ಉಡುಪಿ: ಜೂನ್ ೧(ಹಾಯ್ ಉಡುಪಿ ನ್ಯೂಸ್) ಇತಿಹಾಸ ಪ್ರಸಿದ್ಧ ಉಡುಪಿ ಕಡಿಯಾಳಿಯ ಅಮ್ಮ ಎಂದೇ ಹೆಸರಾದ ಕಡಿಯಾಳಿ ಶ್ರೀಮಹಿಷಮರ್ಧಿನಿ ದೇವಿಯ ದೇವಸ್ಥಾನದ ವೈಭವೋಪೇತ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮಗಳಿಗೆ ಇಂದು ಚಾಲನೆ .

ದಿನಾಂಕ 1-06-2022 ಬುಧವಾರದಿಂದ ದಿನಾಂಕ 09-06-2022 ಶುಕ್ರವಾರದವರೆಗೆ ಕಡಿಯಾಳಿ ಶ್ರೀಮಹಿಷಮರ್ಧಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ. ಕಡಿಯಾಳಿ ಅಮ್ಮ ನ ಈ ಶುಭ ವ್ಯೆಭವೋಪೇತ ಕಾರ್ಯಕ್ರಮಗಳನ್ನು ನೋಡಲು,ಅಂದಗಾಣಿಸಲು ಉಡುಪಿ ಜಿಲ್ಲೆಯೇ ಸಜ್ಜಾಗಿ ನಿಂತಿದ್ದು ಉಡುಪಿ ನಗರವು ಮದುವಣಗಿತ್ತಿಯಂತೆ ಶ್ರಂಗಾರಗೊಂಡಿದೆ.

ರಾಜ್ಯದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿಯವರು ಕಡಿಯಾಳಿ ಶ್ರೀಮಹಿಷಮರ್ಧಿನಿ ದೇವಸ್ಥಾನದಲ್ಲಿ ನಿರ್ಮಿಸಿರುವ ರಾಜ್ಯದ ಪ್ರಪ್ರಥಮ ತಿರುಗುವ ಛಾವಣಿಯನ್ನು ಇಂದು ಉದ್ಘಾಟಿಸಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.

ಕಡಿಯಾಳಿ ಶ್ರೀಮಹಿಷಮರ್ಧಿನಿ ದೇವಸ್ಥಾನ ಸುಮಾರು 1500 ವರ್ಷಗಳ ಇತಿಹಾಸವನ್ನು ಹೊಂದಿದೆ. ಶಂಖ,ಚಕ್ರ, ತ್ರಿಶೂಲ ಧಾರಿಣಿ ಮಹಿಷಾಸುರ ಮರ್ಧಿನಿ ಭಂಗಿಯಲ್ಲಿದ್ದು ಮಂದಹಾಸ ದಲ್ಲಿರುವ ಕಡಿಯಾಳಿ ಶ್ರೀಮಹಿಷಮರ್ಧಿನಿ ಅಮ್ಮ ನಿರಾಭರಣ ಸುಂದರಿ.

ಭಕ್ತಿಯಿಂದ ನಂಬಿ ಬಂದ ಭಕ್ತರಿಗೆ ಇಷ್ಟಾರ್ಥ ಸಿದ್ಧಿಸುವ ಕಡಿಯಾಳಿಯ ದುರ್ಗೆಗೆ ಇದೀಗ ಬ್ರಹ್ಮಕಲಶೋತ್ಸವದ ಸಂಭ್ರಮ.ಉಡುಪಿಯ ಜನತೆಗೆ ನಾಡ ಹಬ್ಬದಂತಾಗಿದ್ದು; ಇಂದಿನಿಂದ ಜೂನ್ 9 ರವರೆಗೆ ಉಡುಪಿ ನಗರದಲ್ಲಿ ಹಬ್ಬದ ವಾತಾವರಣದಂತಾಗಿದೆ. ರಾಜ್ಯದಾದ್ಯಂತದಿಂದ ಕಡಿಯಾಳಿ ಅಮ್ಮನ ಭಕ್ತರು ಬಂದು ದೇವಿಯ ದರ್ಶನ ಪಡೆಯಲಿದ್ದಾರೆ.

ಇಂದಿನಿಂದ ಜೂನ್ 9 ರವರೆಗೆ ಪ್ರತಿ ನಿತ್ಯ ಧಾರ್ಮಿಕ ಕಾರ್ಯಕ್ರಮಗಳು, ಭಜನೆ, ಮನೋರಂಜನಾ ಕಾರ್ಯಕ್ರಮಗಳೊಂದಿಗೆ ಕಡಿಯಾಳಿ ಶ್ರೀಮಹಿಷಮರ್ಧಿನಿ ಅಮ್ಮ ನ ದೇಗುಲದ ಬ್ರಹ್ಮ ಕಲಶೋತ್ಸವ ನೆರವೇರಲಿದೆ.

error: No Copying!