Spread the love

ಕಾಪು:ಮೇ೩೧(ಹಾಯ್ ಉಡುಪಿ ನ್ಯೂಸ್) ಉದ್ಯಾವರದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಯುವಕನನ್ನು ಬಂಧಿಸಿದ ಘಟನೆ ನಡೆದಿದೆ.

ದಿನಾಂಕ 29/05/2022 ರಂದು ಬೆಳಗ್ಗೆ ಕಾಪು ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಶ್ರೀ ಶೈಲ ಮುರಗೋಡ ಅವರು  ರೌಂಡ್ಸ್ ಕರ್ತವ್ಯದಲ್ಲಿರುವಾಗ ಉದ್ಯಾವರ ಗ್ರಾಮದ ಉದ್ಯಾವರ ಬಸ್‌ ನಿಲ್ದಾಣದ ಸಮೀಪ ಅನುಮಾನಾಸ್ಪದವಾಗಿ ಓರ್ವ ವ್ಯಕ್ತಿ ಕಂಡು ಬಂದಿದ್ದು ಆತನು  ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಮೇರೆಗೆ ಆತನನ್ನು ಬಂಧಿಸಿ ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಉಡುಪಿ ಜಿಲ್ಲೆ, ತಾಲೂಕು, ಉದ್ಯಾವರ ಗ್ರಾಮ, ಗುಡ್ಡೆ ಯಂಗಡಿ, ಗೌರವ್ ಹೋಮ್ ನಿವಾಸಿ ಲಿಖಿತ್ (೨೧) ಎಂದು ತಿಳಿಸಿದ್ದು, ಆತನನ್ನು ವೈದ್ಯಕೀಯ ಪರೀಕ್ಷೆಯ ಬಗ್ಗೆ ಪ್ರೊಫೆಸರ್ ಅಂಡ್ ಹೆಡ್  ಕೆ.ಎಂ.ಸಿ ಪೊರೆನ್ಸಿಕ್ ವಿಭಾಗ ಮಣಿಪಾಲ ಇವರ  ಮುಂದೆ ಹಾಜರು ಪಡಿಸಿದಾಗ ಪರೀಕ್ಷಿಸಿದ ವೈದ್ಯರು ದಿನಾಂಕ 30/05/2022 ರಂದು ಲಿಖಿತ್ ಗಾಂಜಾ ಸೇವಿಸಿರುವ ಬಗ್ಗೆ ದೃಢ ಪತ್ರ ನೀಡಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!