ಉಡುಪಿ: ದಿನಾಂಕ:11-07-2026(ಹಾಯ್ ಉಡುಪಿ ನ್ಯೂಸ್) ನಗರಸಭೆಯ ಪೌರಕಾರ್ಮಿಕರ ಮೇಲ್ವಿಚಾರಕರೋರ್ವ ರಿಗೆ ಮೂವರು ಪೌರ ಕಾರ್ಮಿಕರು ಲೈಂಗಿಕ ಕಿರುಕುಳದ ಆರೋಪ ಹೊರಿಸುವುದಾಗಿ ಬೆದರಿಸಿ ಹತ್ತು ಲಕ್ಷ ಹಣಕ್ಕೆ ಬೇಡಿಕೆ ಇಟ್ಟು, ಕೊಡದಿದ್ದಾಗ ಲೈಂಗಿಕ ಕಿರುಕುಳದ ದೂರು ನೀಡಿ ಇದೀಗ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಬೈಂದೂರು ನಿವಾಸಿ ಯೋಗೀಶ(34) ಎಂಬವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು ಉಡುಪಿ ನಗರ ಸಭೆಯಲ್ಲಿ ಪೌರ ಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು 2021 ರಲ್ಲಿ ಪದೋನ್ನತಿ ಹೊಂದಿ ಪ್ರಭಾರ ಮೇಲ್ವಿಚಾರಕನಾಗಿ ಉಡುಪಿ ನಗರ ಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಆ ಸಮಯದಲ್ಲಿ ಆರೋಪಿ 1 ನೇ ಯೋಗೀಶ್ ಪ್ರಭು 2 ನೇ ವಿನಯ ಕುಮಾರ್ ಮತ್ತು ಅರೋಪಿತೆ ಸ್ಮಿತ ಬಿ ಬಂಗೇರಾ ರವರು ಉಡುಪಿ ನಗರ ಸಭೆಯ ಪೌರ ಕಾರ್ಮಿಕ ಮತ್ತು ಹೊರಗುತ್ತಿಗೆ ಚಾಲಕರಾಗಿ ಕರ್ತವ್ಯ ನಿರ್ವಹಿಸಿ ಕೊಂಡಿದ್ದಾರೆ.
ಅವರಿಗೆ ಅನುಕೂಲವಾಗುವಂತೆ ದೈನಂದಿನ ಕರ್ತವ್ಯದಲ್ಲಿ ಅವರನ್ನು ನಿಯೋಜನೆ ಮಾಡಿಕೊಳ್ಳಬೇಕು ಇಲ್ಲವಾದರೆ ದುರಾಲೋಚನೆಯಿಂದ ಅರೋಪಿತೆ ಸ್ಮಿತಾ ಬಿ ಇವರನ್ನು ಬಳಸಿಕೊಂಡು ಯೋಗೀಶರ ವಿರೂದ್ದ ಲೈಂಗಿಕ ಕಿರುಕುಳದ ಆರೋಪ ಹೊರಿಸುತ್ತೇನೆ ಎಂದು ಹೇಳಿ ಹೆದರಿಸುತ್ತಿದ್ದರು. ನಂತರ 10 ಲಕ್ಷ ಹಣ ನೀಡಬೇಕೆಂದು ತಿಳಿಸಿರುತ್ತಾರೆ. ಈ ಬಗ್ಗೆ ಭಯಗೊಂಡು ಯೋಗೀಶರು ಆರೋಪಿಗಳಿಗೆ 2 ಲಕ್ಷ ಹಣವನ್ನು ನಗದು ರೂಪದಲ್ಲಿ ನೀಡಿರುತ್ತಾರೆ. ನಂತರ ಆರೋಪಿಗಳು ಉಳಿದ 8 ಲಕ್ಷ ಹಣವನ್ನು ನೀಡುವಂತೆ ಬೆದರಿಸಿರುತ್ತಾರೆ. ಇದಕ್ಕೆ ಯೋಗೀಶರು ಹಣವನ್ನು ನೀಡಲು ನಿರಾಕರಿಸಿದ್ದು ದಿನಾಂಕ: 29/01/2026 ರಂದು ಆರೋಪಿತೆ ಸ್ಮಿತಾ ಬಿ ಬಂಗೇರಾ ಹೆಸರಿನಲ್ಲಿ ಉಡುಪಿ ಮಹಿಳಾ ಠಾಣೆಯಲ್ಲಿ ಲೈಂಗಿಕ ಅತ್ಯಾಚಾರ ಆರೋಪದಲ್ಲಿ ಪ್ರಕರಣ ದಾಖಲಿಸಿರುತ್ತಾರೆ.
ಯೋಗೀಶರವರು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿರುತ್ತಾರೆ. ದಿನಾಂಕ: 30/06/2026 ರಂದು ಯೋಗೀಶರವರ ಮೊಬೈಲ್‌ಗೆ ಕರೆ ಮಾಡಿ ಉಳಿಕೆ ಹಣ 8 ಲಕ್ಷ ನೀಡುವಂತೆ ಇಲ್ಲವಾದಲ್ಲಿ ಯೋಗೀಶರವರ ವಿರುದ್ದ ಆರೋಪಿತೆ ಸ್ಮಿತಾ ಬಂಗೇರಾ ಹೆಸರಿನಲ್ಲಿ ಇನ್ನೊಂದು ದೂರು ದಾಖಲಿಸುವುದಾಗಿ ಬೆದರಿಕೆ ಹಾಕಿರುತ್ತಾರೆ.
ನಂತರ ದಿನಾಂಕ; 06/07/2026 ರಂದು ಮಣಿಪಾಲ ಪೆರಂಪಳ್ಳಿ ಸರ್ಕಲ್‌ನಲ್ಲಿ ಆರೋಪಿತ ಯೋಗೀಶ್ ಪ್ರಭು ಯೋಗೀಶರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ಉಳಿದ ಹಣ 8 ಲಕ್ಷ ಕೊಡುತ್ತಿಯಾ ಇಲ್ಲವೋ? ನೀನು ಸ್ಮಿತಾ ಬಂಗೇರಾಳನ್ನು ಕಿರುಕುಳ ಮಾಡಿದ್ದೀಯ ಎಂದು ನಿನ್ನ ವಿರುದ್ದ ದೂರು ನೀಡುತ್ತೇನೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಬೆದರಿಸಿರುತ್ತಾರೆ ಎಂದು ಯೋಗೀಶರವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 3(1)(r)(s) SC ST ACT 308(2) , 35̧2 351(2), 3(5) BNS ರಂತೆ ಪ್ರಕರಣ ದಾಖಲಾಗಿದೆ.
