ಉಡುಪಿ: ದಿನಾಂಕ:08-07-2026(ಹಾಯ್ ಉಡುಪಿ ನ್ಯೂಸ್)ಸಾಲ ಪಡೆದು ಕೊಂಡಿದ್ದ ಪರಿಚಯಸ್ಥ ಕುಟುಂಬವೊಂದು ಸಾಲ ಮರುಪಾವತಿ ಮಾಡುವಂತೆ ಕೇಳಿದಾಗ ಬೆದರಿಕೆ ಹಾಕಿದ್ದಾರೆ ಎಂದು ಸಜ್ಜನ್ ಶೆಟ್ಟಿ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಉಡುಪಿ ಅಂಬಲಪಾಡಿ ಗ್ರಾಮದ ನಿವಾಸಿ ಸಜ್ಜನ್ ಶೆಟ್ಟಿ (34) ಎಂಬವರಿಗೆ ಉದ್ಯೋಗದ ನಿಮಿತ್ತ ಸಿದ್ದಾರ್ಥ ಶೆಟ್ಟಿಯವರ ಪರಿಚಯವಾಗಿದ್ದು ಆತನಿಂದ ಆತನ ತಂದೆ ಅಮರನಾಥ್ ಶೆಟ್ಟಿ, ತಾಯಿ ಚಂದ್ರಕಲಾ ಎ ಶೆಟ್ಟಿ, ಮಲ್ಲಿಕಾ ಶೆಟ್ಟಿ , ಪ್ರಜ್ವಲ್ ಶೆಟ್ಟಿ, ಸದಾಶಿವ ಶೆಟ್ಟಿಯವರ ಪರಿಚಯವಾಗಿದ್ದು ಸಜ್ಜನ್ ಶೆಟ್ಟಿ ಮತ್ತು ಆರೋಪಿತರು ಅಗಾಗ ಭೇಟಿಯಾಗುತ್ತಿದ್ದರು ಒಂದು ದಿನ ಸಿದ್ದಾರ್ಥ ಶೆಟ್ಟಿಯವರಿಗೆ ಹಣದ ಅವಶ್ಯಕತೆ ಇದ್ದಾಗ ಅರೋಪಿತರೆಲ್ಲರೂ ಸಜ್ಜನ್ ಶೆಟ್ಟಿ ಯವರ ಬಳಿಗೆ ಬಂದು ಜೊತೆಗೆ ಸೇರಿ ಮೋಸ ಮಾಡುವ ಉದ್ದೇಶದಿಂದ ನಮಗೆ ಹಣ ನೀಡಿ ಎಂದು ಕೇಳಿಕೊಂಡರು.
ಅದರಂತೆ 5 ತಿಂಗಳ ಒಳಗಾಗಿ ಸಾಲವನ್ನು ಮರಳಿ ಕೊಡುವುದಾಗಿ ನಂಬಿಸಿ 10,00,000/- ಲಕ್ಷ ರೂಪಾಯಿ ಪಡೆದುಕೊಂಡಿರುತ್ತಾರೆ. ಸಜ್ಜನ್ ಶೆಟ್ಟಿ ಯವರು ಹಣವನ್ನು ವಾಪಾಸು ಕೇಳಿದಾಗ ಕಾರಣ ಕೊಟ್ಟು ತಪ್ಪಿಸಿಕೊಳ್ಳುತ್ತಿದ್ದರು. ಅರೋಪಿಗಳು ಸಜ್ಜನ್ ಶೆಟ್ಟಿ ಯವರಿಗೆ ಕೊಟಕ್ ಮಹೀಂದ್ರ ಖಾತೆಯ ಚೆಕ್ಕ್‌ನ್ನು ನೀಡಿರುತ್ತಾರೆ. ಚೆಕ್ಕ್‌ನ್ನು ಬ್ಯಾಂಕಿನಲ್ಲಿ ಜಮಾ ಮಾಡಿದಾಗ ಸಾಕಷ್ಟು ಹಣ ಇಲ್ಲದೆ ಇದ್ದು ಚೆಕ್ ಹಿಂತಿರುಗಿಸಿರುತ್ತಾರೆ.
ಈ ವಿಚಾರವನ್ನು ಆರೋಪಿತರಿಗೆ ತಿಳಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುತ್ತಾರೆ. ಆರೋಪಿಗಳು ವಂಚನೆ ಮಾಡುವ ಉದ್ದೇಶದಿಂದಲೇ ಹಣವನ್ನು ಪಡೆದು ಮೋಸ ಮಾಡಿದ್ದಾರೆ ಎಂದು ಸಜ್ಜನ್ ಶೆಟ್ಟಿ ಯವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 420, 406, 504, 506 IPC ಯಂತೆ ಪ್ರಕರಣ ದಾಖಲಾಗಿದೆ.
